ADVERTISEMENT

ದಕ್ಷಿಣ ಆಫ್ರಿಕಾ ಮಣಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಏಜೆನ್ಸೀಸ್
Published 11 ಜೂನ್ 2017, 16:04 IST
Last Updated 11 ಜೂನ್ 2017, 16:04 IST
01 ಬಾಲ್‌ಗಳಲ್ಲಿ 76 ರನ್‌ ಗಳಿಸಿದ ವಿರಾಟ್‌ ಕೊಹ್ಲಿ
01 ಬಾಲ್‌ಗಳಲ್ಲಿ 76 ರನ್‌ ಗಳಿಸಿದ ವಿರಾಟ್‌ ಕೊಹ್ಲಿ   

ಕೆನ್ನಿಂಗ್ಟನ್‌ ಓವೆಲ್‌, ಲಂಡನ್‌: ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳ ಗೆಲುವನ್ನು ತನ್ನದಾಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಟೀಮ್‌ ಇಂಡಿಯಾ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟಾಸ್‌ ಗೆದ್ದಿದ್ದ ಭಾರತ ಫೀಲ್ಡಿಂಗ್‌ ಆರಿಸಿಕೊಂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಆಟಗಾರರು 44.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 191 ರನ್‌ ಕಲೆಹಾಕಿದ್ದರು.

192 ರನ್‌ಗಳ ಗೆಲುವಿನ ಗುರಿಯ ಬೆನ್ನತ್ತಿದ ಭಾರತ 38 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 193 ರನ್‌ ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.

ADVERTISEMENT

ಶಿಖರ್‌ ಧವನ್‌ 83 ಬಾಲ್‌ಗಳಲ್ಲಿ 78 ರನ್‌ ಗಳಿಸಿ ಔಟಾದರು. ನಾಯಕ ವಿರಾಟ್‌ ಕೊಹ್ಲಿ 101 ಬಾಲ್‌ಗಳಲ್ಲಿ 76 ರನ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.