ADVERTISEMENT

ದಕ್ಷಿಣ ವಲಯಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಮೈಸೂರು: ದಕ್ಷಿಣ ವಲಯ ತಂಡವು  ಭಾನುವಾರ ಮಧ್ಯಾಹ್ನ ಮೈಸೂರು ವಿಶ್ವವಿದ್ಯಾಲಯದ ಪೆವಿಲಿಯನ್ ಮೈದಾನದಲ್ಲಿ 18ನೇ ಅಂಧರ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಪ್ರಶಸ್ತಿಯನ್ನು ಸತತ ಎರಡನೇ ಬಾರಿ ತನ್ನ ಮಡಿಲಿಗೆ ಹಾಕಿಕೊಂಡಿತು.

ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಮತ್ತು ಪರಿವರ್ತನ ಅಂಗವಿಕಲರ ಸಂಸ್ಥೆ ಆಶ್ರಯದಲ್ಲಿ ನಡೆಯ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯವು 59 ರನ್ನುಗಳಿಂದ ಪಶ್ಚಿಮ ವಲಯದ ವಿರುದ್ಧ ಜಯ ದಾಖಲಿಸಿತು.  ನಾಯಕನಿಗೆ ತಕ್ಕ ಆಟವಾಡಿದ ಶೇಖರ್ ನಾಯ್ಕ (56; 8ಬೌಂಡರಿ, 32ಕ್ಕೆ2) ಮತ್ತು ಜಿ. ವೆಂಕಟೇಶ್ (91; 8ಬೌಂಡರಿ) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ದಕ್ಷಿಣ ವಲಯ ನೀಡಿದ್ದ 223 ರನ್ನುಗಳ ಗುರಿಯನ್ನು ಬೆನ್ನತ್ತಿದ್ದ ಪಶ್ಚಿಮ ವಲಯವು 19.4 ಓವರುಗಳಲ್ಲಿ ಕೇವಲ 164 ರನ್ನುಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ವಿಜೇತ ತಂಡದ ಆಟಗಾರರು ಭರ್ಜರಿ ವಿಜಯೋತ್ಸವ ಆಚರಿಸಿತು.

ಸ್ಕೋರು: ದಕ್ಷಿಣ ವಲಯ: 20 ಓವರುಗಳಲ್ಲಿ 8 ವಿಕೆಟ್‌ಗಳೀಗೆ 223 (ಜಿ. ವೆಂಕಟೇಶ್ 91, ಶೇಖರ್ ನಾಯಕ 56, ಅಜಯಕುಮಾರ 25, ಹಿತೇಶ್ 30ಕ್ಕೆ2, ಗಣೇಶ್ 46ಕ್ಕೆ3);
ಪಶ್ಚಿಮ ವಲಯ: 19.4 ಓವರುಗಳಲ್ಲಿ 164 (ಸಂಜಯ್ 75, ಜಿಜ್ಞೆಶ್ 16, ಅಜಯಕುಮಾರ್ ರೆಡ್ಡಿ 24ಕ್ಕೆ2, ಶೇಖರ್ ನಾಯಕ 32ಕ್ಕೆ2 ಪುಷ್ಪರಾಜ್ 44ಕ್ಕೆ2)
ಫಲಿತಾಂಶ: ದಕ್ಷಿಣ ವಲಯಕ್ಕೆ 59 ರನ್ನುಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.