ADVERTISEMENT

ದುಬೈ ಓಪನ್‌್: ಫೈನಲ್‌ಗೆ ಥಾಮಸ್‌ ಬೆರ್ಡಿಕ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2014, 19:30 IST
Last Updated 28 ಫೆಬ್ರುವರಿ 2014, 19:30 IST
ದುಬೈ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಜರ್ಮನಿಯ ಫಿಲಿಪ್‌ ಕೊಹ್ಲ್‌ಶ್ರೇಬರ್‌ ಅವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದ ಥಾಮಸ್‌ ಬೆರ್ಡಿಕ್‌ ಸಂಭ್ರಮಿಸಿದ ಕ್ಷಣ 	–ರಾಯಿಟರ್ಸ್‌ ಚಿತ್ರ
ದುಬೈ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಜರ್ಮನಿಯ ಫಿಲಿಪ್‌ ಕೊಹ್ಲ್‌ಶ್ರೇಬರ್‌ ಅವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದ ಥಾಮಸ್‌ ಬೆರ್ಡಿಕ್‌ ಸಂಭ್ರಮಿಸಿದ ಕ್ಷಣ –ರಾಯಿಟರ್ಸ್‌ ಚಿತ್ರ   

ದುಬೈ (ಪಿಟಿಐ): ಜೆಕ್‌ ಗಣರಾಜ್ಯದ  ಥಾಮಸ್‌ ಬೆರ್ಡಿಕ್‌ ಇಲ್ಲಿ ನಡೆಯು ತ್ತಿರುವ  ದುಬೈ ಡ್ಯೂಟಿ ಫ್ರೀ ಟೆನಿಸ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಟೂರ್ನಿಯ ಮೊದಲ ಸೆಮಿಫೈನಲ್‌ ಹೋರಾಟ ದಲ್ಲಿ ಬೆರ್ಡಿಕ್‌ 7–5, 7–5ರಲ್ಲಿ ಜರ್ಮನಿಯ ಫಿಲಿಪ್‌ ಕೊಹ್ಲ್‌ಶ್ರೇಬರ್‌ ಅವರನ್ನು ಮಣಿಸಿದರು.

ಪಂದ್ಯದ ಉದ್ದಕ್ಕೂ ಪರಿಣಾಮಕಾರಿ ಹೊಡೆತಗಳ ಮೂಲಕ ಮಿಂಚಿದ ಬೆರ್ಡಿಕ್‌, ಆಟದ ವೇಳೆ ಎದುರಾಳಿ ಆಟಗಾರ ಒಡ್ಡಿದ  ತೀವ್ರ ಪೈಪೋಟಿ ಯನ್ನು ಮೆಟ್ಟಿನಿಲ್ಲುವ ಮೂಲಕ ಜಯ ತಮ್ಮದಾಗಿಸಿ ಕೊಂಡರು.

ಸೆಮಿಗೆ ಫೆಡರರ್‌, ಜೊಕೊವಿಕ್‌: ವಿಶ್ವದ 8ನೇ ರ್‍ಯಾಂಕ್‌ನ ಆಟಗಾರ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌್ ಹಾಗೂ ಎರಡನೇ ರ್‍ಯಾಂಕ್‌ನ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಫೆಡರರ್‌  6–2, 6–2ರಲ್ಲಿ ಜೆಕ್‌ ಗಣರಾಜ್ಯದ ಲುಕಾಸ್ ರೊಸೊಲ್‌ ಅವರನ್ನು  ಸುಲಭವಾಗಿ ಸೋಲಿಸಿದರು.

ಟೂರ್ನಿಯುದ್ದಕ್ಕೂ ಉತ್ತಮ ಲಯ ಕಾಪಾಡಿಕೊಂಡು ಬಂದಿರುವ ಫೆಡರರ್‌  ಈ ಪಂದ್ಯದಲ್ಲಿಯೂ ತಮ್ಮ ಹಿಂದಿನ ಲಯದಲ್ಲೇ ಆಡಿದರು. ಪಂದ್ಯದ ಎರಡೂ ಸೆಟ್‌ಗಳಲ್ಲಿ ಪ್ರಭುತ್ವ ಸಾಧಿಸಿದ ಅವರು,  ಎದುರಾಳಿ ಆಟಗಾರನಿಗೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡದೆ ಗೆಲುವಿನ ಸಿಹಿ ಕಂಡರು.

ದಿನದ ಮತ್ತೊಂದು ಎಂಟರ ಘಟ್ಟದ ಪಂದ್ಯದಲ್ಲಿ ರಷ್ಯಾದ ಮೈಕೆಲ್‌ ಯೂಜ್ನಿ  ಅನಾರೋಗ್ಯದ ಕಾರಣ ಪಂದ್ಯದಿಂದ ಹಿಂದೆ ಸರಿದರು. ಹೀಗಾಗಿ ಜೊಕೊವಿಕ್‌ ವಾಕ್‌ ಓವರ್‌ ಪಡೆದು ನಾಲ್ಕರ ಘಟ್ಟ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.