ADVERTISEMENT

ದೇಹದಾರ್ಢ್ಯ ತಂಡಕ್ಕೆ ಆಯ್ಕೆ ಟ್ರಯಲ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಬೆಂಗಳೂರು:  ದೆಹಲಿಯಲ್ಲಿ ಮಾರ್ಚ್ 25ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ದೇಹರ್ಧಾಡ್ಯ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡವನ್ನು ಆಯ್ಕೆ ಮಾಡಲು ಕರ್ನಾಟಕ ರಾಜ್ಯ ದೇಹರ್ಧಾಡ್ಯ ಮತ್ತು ಫಿಟ್‌ನೆಸ್ ಸಂಸ್ಥೆಯು (ಕೆಎಸ್‌ಬಿಬಿಎಫ್‌ಎ) ಮಾ. 23ರಂದು ಬೆಳಿಗ್ಗೆ 11ಗಂಟೆಗೆ ನಗರದ ಎಂ.ಎಸ್. ರಾಮಯ್ಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯ್ಕೆ ಟ್ರಯಲ್ ಹಮ್ಮಿಕೊಂಡಿದೆ.

55, 60, 65, 70, 70, 75, 80, 85, 90 ಮತ್ತು 90+  ಕೆಜಿ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತ ಸ್ಪರ್ಧಿಗಳು ಈ ಆಯ್ಕೆ ಟ್ರಯಲ್‌ನಲ್ಲಿ ಪಾಲ್ಗೊಳ್ಳಬಹುದು.

70 ಕೆಜಿ ಒಳಗಿನ ಹಾಗೂ ಮೇಲ್ಟಟ್ಟ ಅಂಗವಿಕಲರ ದೇಹಧಾರ್ಡ್ಯ ಆಯ್ಕೆ ಟ್ರಯಲ್ ಕೂಡಾ ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ಕೆಎಸ್‌ಬಿಬಿಎಫ್‌ಎ ಅಧ್ಯಕ್ಷ ಡಾ. ಬೆಟ್ಟೆಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.