ADVERTISEMENT

ದೋನಿ ಪಡೆಗೆ ಐಸಿಸಿ ಶೀಲ್ಡ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST
ಸೋಮವಾರ ಕಾರ್ಡಿಪ್‌ನಲ್ಲಿ ಭಾರತ ತಂಡದ ನಾಯಕ ಎಂ.ಎಸ್.ದೋನಿ ಅವರು ಸಮಿತಿಯ ಮಾಜಿ ಅಧ್ಯಕ್ಷ ಡೇವಿಡ್ ಮಾರ್ಗನ್ ಅವರಿಂದ ಐಸಿಸಿ ಏಕದಿನ ಶೀಲ್ಡ್‌ನ್ನು ಸ್ವೀಕರಿಸಿದರು  -ಪಿಟಿಐ ಚಿತ್ರ
ಸೋಮವಾರ ಕಾರ್ಡಿಪ್‌ನಲ್ಲಿ ಭಾರತ ತಂಡದ ನಾಯಕ ಎಂ.ಎಸ್.ದೋನಿ ಅವರು ಸಮಿತಿಯ ಮಾಜಿ ಅಧ್ಯಕ್ಷ ಡೇವಿಡ್ ಮಾರ್ಗನ್ ಅವರಿಂದ ಐಸಿಸಿ ಏಕದಿನ ಶೀಲ್ಡ್‌ನ್ನು ಸ್ವೀಕರಿಸಿದರು -ಪಿಟಿಐ ಚಿತ್ರ   

ಕಾರ್ಡಿಪ್ (ಪಿಟಿಐ): ಏಕದಿನ ಕ್ರಿಕೆಟ್ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತ ತಂಡದವರು ಐಸಿಸಿ ಶೀಲ್ಡ್‌ಅನ್ನು ಮುಡಿಗೇರಿಸಿಕೊಂಡಿದ್ದಾರೆ.

ಇಲ್ಲಿನ ಸ್ವಾಲೆಕ್ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಐಸಿಸಿಯ ಮಾಜಿ ಅಧ್ಯಕ್ಷ ಡೇವಿಡ್ ಮಾರ್ಗನ್ ಅವರು ಭಾರತ ತಂಡದ ನಾಯಕ ದೋನಿ ಅವರಿಗೆ ಪ್ರಶಸ್ತಿ ಫಲಕ ಹಾಗೂ ಸುಮಾರು 96 ಲಕ್ಷ ರೂಪಾಯಿ ಮೊತ್ತದ ಚೆಕ್‌ನ್ನು ಪ್ರದಾನ ಮಾಡಿದ್ದಾರೆ.

119 ಅಂಕಗಳೊಂದಿಗೆ ಭಾರತ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಆಸ್ಟ್ರೇಲಿಯಾ (116) ಹಾಗೂ ದಕ್ಷಿಣ ಆಫ್ರಿಕಾ (113) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೋನಿ, `ಕ್ರೀಡಾಂಗಣದಲ್ಲಿ ನಮ್ಮ ಆಟಗಾರರು ಹೇಗೆ ವರ್ತಿಸುತ್ತಾರೆ ಎಂಬುದಕ್ಕೆ ಏಕದಿನ ಪಂದ್ಯಗಳಲ್ಲಿ ದೊರೆತ ಅಗ್ರ ಪಟ್ಟವೇ ಸಾಕ್ಷಿ. ಇದು ನಿಶ್ಚಿತವಾಗಿಯೂ ಮತ್ತಷ್ಟು ಗೌರವವನ್ನು ತಂದುಕೊಟ್ಟಿದೆ' ಎಂದು ನುಡಿದಿದ್ದಾರೆ.

`ವಿಶ್ವದಲ್ಲಿ ಅಗ್ರಪಟ್ಟದಲ್ಲಿರುವ ವಿಷಯ ಗೌರವದ ಸಂಗತಿ. ಇದರಿಂದ ನಾವು ಆಡಿರುವ ಆಟ ರೀತಿ ಹಾಗೂ ಮೈದಾನದಲ್ಲಿ ನಮ್ಮ ವರ್ತನೆಗೂ ಗೌರವ ಸಂದಿದೆ' ಎಂದು ದೋನಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.