ADVERTISEMENT

ನಾಕೌಟ್‌ ಹಂತಕ್ಕೆ ವರ್ಷಾ

ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌: ಮನನ್‌, ಚಿತ್ರಾಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಡಗಾವ್‌ಪಿಲ್ಸ್‌, ಲಾಟ್ವಿಯ (ಪಿಟಿಐ):  ಭಾರತದ ವರ್ಷಾ ಸಂಜೀವ್‌ ಇಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ನಾಕೌಟ್‌ ಹಂತ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ  ಲೀಗ್‌ ಪಂದ್ಯದಲ್ಲಿ ಕರ್ನಾಟಕದ ವರ್ಷಾ 3–0ರಲ್ಲಿ (65–47, 48–2, 53–40) ಉಕ್ರೇನ್‌ನ ಮರಿಯಾ ಬಕಾರಸ್ಕಾ ಅವರನ್ನು ಮಣಿಸಿದರು.

16ರ ಹರೆಯದ ವರ್ಷಾ ಮೂರೂ ಫ್ರೇಮ್‌ಗಳಲ್ಲಿ ಪಾರಮ್ಯ ಮೆರೆದರು. ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಕಿರಿಯ ಸ್ಪರ್ಧಿ ಎನಿಸಿರುವ ಅವರು ಲೀಗ್‌ ಹಂತದ ಎಲ್ಲಾ ಪಂದ್ಯಗಳನ್ನು ಕೊನೆಗೊಳಿಸಿದರು. ಕರ್ನಾಟಕದ ಮತ್ತೊಬ್ಬ ಸ್ಪರ್ಧಿ ಚಿತ್ರಾ ಮಗಿಮೈರಾಜ್‌ 3–1ರಲ್ಲಿ (51–63, 80–58, 69–20, 74–25) ಹಾಂಕಾಂಗ್‌ನ ಯು ಚಿಂಗ್‌ ಎದುರು ಗೆದ್ದರು.

ಮೊದಲ ಫ್ರೇಮ್‌ನಲ್ಲಿ ಚಿತ್ರಾ ಆಘಾತ ಅನುಭವಿಸಿದರು. ಆದರೆ ನಂತರದ ಮೂರೂ ಫ್ರೇಮಗಳಲ್ಲಿ ಮಿಂಚು ಹರಿಸಿದರು. ಅವರಿಗೆ ಲಭಿಸಿದ ಎರಡನೇ ಗೆಲುವು ಇದು. ಸೋಮವಾರ ಸೋಲು ಕಂಡಿದ್ದ ನೀನಾ ಪ್ರವೀಣ್‌ 3–1ರಲ್ಲಿ (55–13, 56–43, 39–70, 81–58) ರಷ್ಯಾದ ಇರಿನಾ ಗೊರ್ಬಾತಯಾ ಎದುರು ಜಯ ಗಳಿಸಿದರು.

ಪುರುಷರ ವಿಭಾಗದ ಲೀಗ್‌ ಪಂದ್ಯದಲ್ಲಿ ಮನನ್‌ ಚಂದ್ರ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಅವರು 4–2ರಲ್ಲಿ (75–44, 0–88, 46–56, 80–17, 82–14, 51–7ರಲ್ಲಿ ಬೆಲ್ಜಿಯಂನ ಥಾಮಸ್‌ ಶಲ್‌ಸ್ಕಿ ಅವರನ್ನು ಪರಾಭವಗೊಳಿಸಿದರು. ಆದರೆ ಶಹಬಾಜ್‌ ಅದಿಲ್‌ ಖಾನ್‌ ಹಾಗೂ ಬ್ರಿಜೇಶ್‌ ದಾಮನಿ ಸೋಲು ಕಂಡರು.

ADVERTISEMENT

ಶಹಬಾಜ್‌ 2–4ರಲ್ಲಿ (50–72, 68–16, 6–88, 25–56, 61–33, 15–71) ಐರ್ಲೆಂಡ್‌ನ ಬ್ರೆಂಡನ್‌ ಒಡೊನೊಗ್‌ ಎದುರೂ, ಬ್ರಿಜೇಶ್‌ 2–4ರಲ್ಲಿ (41–70, 82–5, 69–64, 49–61, 44–69, 31–65) ಜರ್ಮನಿಯ ರೊಮಾನ್‌ ಡಿಟ್ಜೆಲ್‌ ವಿರುದ್ಧವೂ ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.