ADVERTISEMENT

ನಾನು ಆಡಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಕಳೆದ ಒಂದು ವಾರದ ಅವಧಿಯಲ್ಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೆಲವೊಂದು ರೋಚಕ ಪಂದ್ಯಗಳು ನಡೆದಿವೆ. ಟೂರ್ನಿ ಮುಂದುವರಿದಂತೆ ಇಂತಹ ಮತ್ತಷ್ಟು ಪಂದ್ಯಗಳನ್ನು ನಮಗೆ ನಿರೀಕ್ಷಿಸಬಹುದು. ಶ್ರೀಲಂಕಾ ವಿರುದ್ಧ ಶನಿವಾರ ನಡೆಯುವ ಪಂದ್ಯ ಆಸ್ಟ್ರೇಲಿಯಾ ಪಾಲಿಗೆ ಸವಾಲಿನದ್ದು. ಟೂರ್ನಿಯಲ್ಲಿ ಇದುವರೆಗೆ ಆಸೀಸ್ ತಂಡ ಉತ್ತಮ ಪ್ರದರ್ಶನ ನೀಡಿದ್ದರಿಂದ ಎಲ್ಲ ಆಟಗಾರರು ಆತ್ಮವಿಶ್ವಾಸದಲ್ಲಿದ್ದಾರೆ.

ಪಾಂಟಿಂಗ್ ಬಳಗಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಏಕೆಂದರೆ ಗುಂಪಿನಲ್ಲಿ ಮೊದಲ ಎರಡು ಸ್ಥಾನದಲ್ಲಿರುವವರು ಯಾರು ಎಂಬುದನ್ನು ನಿರ್ಧರಿಸುವಲ್ಲಿ ಈ ಪಂದ್ಯದ ಪಾತ್ರ ಹಿರಿದು. ಇಲ್ಲಿ ಗೆಲುವು ಪಡೆದರೆ ಕ್ವಾರ್ಟರ್ ಫೈನಲ್ ಪ್ರವೇಶಿಸುವುದು ಖಚಿತ. ಲಂಕಾ ತಂಡ ಕೆಲವು ಅತ್ಯುತ್ತಮ ಆಟಗಾರರನ್ನು ಒಳಗೊಂಡಿದೆ. ಸಂಗಕ್ಕಾರ, ಜಯವರ್ಧನೆ ಮತ್ತು ದಿಲ್ಶಾನ್ ಅವರು ಪ್ರಮುಖ ಆಟಗಾರರು. ದಿಲ್ಶಾನ್ ಅಪಾಯಕಾರಿ ಬ್ಯಾಟ್ಸ್‌ಮನ್ ಕೂಡಾ ಆಗಿದ್ದಾರೆ.
 
ಬೌಲಿಂಗ್‌ನಲ್ಲಿ ಮುರಳೀಧರನ್ ಲಂಕಾ ತಂಡದ ಬಲ ಎನಿಸಿದ್ದಾರೆ. ಅವರ ಎದುರು ಎಚ್ಚರಿಕೆಯಿಂದ ಆಡಬೇಕು. ಮಾಲಿಂಗ ಕೂಡಾ ಅಪಾಯಕಾರಿ ಬೌಲರ್. ಹೊಸ ಚೆಂಡನ್ನು ಸ್ವಿಂಗ್ ಮಾಡಬಲ್ಲ ತಾಕತ್ತು ಅವರಿಗಿದೆ. ಅದೇ ರೀತಿ ಚೆಂಡು ಹಳೆಯದಾದಂತೆ ಅದರಲ್ಲಿ ರಿವರ್ಸ್ ಸ್ವಿಂಗ್ ಕೂಡಾ ಮಾಡಬಲ್ಲರು. ಇವರಿಬ್ಬರಿಗೆ ಯಾವುದೇ ವಿಕೆಟ್ ನೀಡದಿದ್ದರೆ ನಮಗೆ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯ.

ಪ್ರಸಕ್ತ ವಿಶ್ವಕಪ್‌ನಲ್ಲಿ ಸ್ಪಿನ್ನರ್ಗಳು ಪ್ರಮುಖ ಪಾತ್ರವಹಿಸಲಿರುವರು ಎಂಬ ಮಾತುಗಳು ಟೂರ್ನಿಗೆ ಮುನ್ನ ಕೇಳಿಬಂದಿದ್ದವು. ಆದರೆ ನಿಜವಾಗಿ ಇದುವರೆಗೆ ಪ್ರಭಾವಿ ಎನಿಸಿದ್ದು ವೇಗದ ಬೌಲರ್‌ಗಳು. ಬ್ರೆಟ್ ಲೀ, ಮಿಷೆಲ್ ಜಾನ್ಸನ್ ಮತ್ತು ಶಾನ್ ಟೇಟ್ ಅವರು ಈಗಾಗಲೇ ತಮ್ಮ ಸಾಮರ್ಥ್ಯ ತೋರಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಸ್ಪಿನ್ನರ್‌ಗಳೂ ಪ್ರಭುತ್ವ ಸಾಧಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.