ADVERTISEMENT

ನಾಯಕತ್ವ ಕುಕ್ ಆಟ ಬದಲಾಯಿಸಿದೆ: ಗೂಚ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ಅಹಮದಾಬಾದ್: `ಕೆಲ ಆಟಗಾರರು ಉತ್ತಮ ನಾಯಕನ ಮಾರ್ಗದರ್ಶನದಡಿಯಲ್ಲಿ ಅರಳುತ್ತಾರೆ. ಆದರೆ ಅಲಸ್ಟೇರ್ ಕುಕ್ ಅವರಿಗೆ ಲಭಿಸಿರುವ ನಾಯಕತ್ವವೇ ವರದಾನವಾಗಿದೆ.

ನಾಯಕನ ಜವಾಬ್ದಾರಿ ಕುಕ್ ಆಟ ಬದಲಾಯಿಸಿದೆ~ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರಹಾಮ್ ಗೂಚ್ ನುಡಿದಿದ್ದಾರೆ. `ತಂಡ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕುಕ್ ಬದ್ಧತೆ ಪ್ರದರ್ಶಿಸಿದರು.

ಇದೊಂದು ವಿಶೇಷ ಇನಿಂಗ್ಸ್. ನಮ್ಮ ಆಟಗಾರರ ಸಾಮರ್ಥ್ಯದ ಮೇಲೆ ನಂಬಿಕೆ ಇದೆ. ನಮ್ಮ ಆಸೆಗಳನ್ನು ಪೂರೈಸಲು ಉತ್ತಮ ನಾಯಕ ಕೂಡ ಇದ್ದಾರೆ~ ಎಂದು ಅವರು ಪಂದ್ಯದ ಬಳಿಕ ನುಡಿದರು.

`ಪಂದ್ಯ ಇನ್ನೂ ಭಾರತದ ಕೈಯಲ್ಲಿದೆ. ಆದರೆ ನಮ್ಮ ಆಟಗಾರರು ತಿರುಗೇಟು ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ನಮ್ಮ ಪಾಲಿಗೆ ಭಾನುವಾರ ಉತ್ತಮ ದಿನವಾಗಿತ್ತು~ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.