ADVERTISEMENT

ನೆಹರೂ ಕಪ್ ಫುಟ್‌ಬಾಲ್: ಆಟಗಾರರ ಶಿಬಿರ ಬೆಂಗಳೂರಿನಲ್ಲಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಬೆಂಗಳೂರು: ನೆಹರೂ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಸಿದ್ಧತಾ ಶಿಬಿರ ಬೆಂಗಳೂರಿನಲ್ಲಿ ಆಗಸ್ಟ್ 3 ರಿಂದ 15ರ ವರೆಗೆ ನಡೆಯಲಿದೆ. ನಿಗದಿತ ವೇಳಾಪಟ್ಟಿಯಂತೆ ಶಿಬಿರ ನೋಯ್ಡಾದಲ್ಲಿ ಬುಧವಾರ ಆರಂಭವಾಗಬೇಕಿತ್ತು. ಆದರೆ ಮಳೆಯ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಶಿಬಿರದಲ್ಲಿ ಒಟ್ಟು 37 ಸಂಭವನೀಯ ಆಟಗಾರರು ಪಾಲ್ಗೊಳ್ಳುವರು. ಭಾರತ ತಂಡದ ಕೋಚ್ ವಿಮ್ ಕೋವರ್‌ಮನ್ಸ್ ಹಾಗೂ ಆಟಗಾರರು ಗುರುವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಕೆಎಸ್‌ಎಫ್‌ಎ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.