ADVERTISEMENT

ನೈಜೀರಿಯಾ ತಂಡಕ್ಕೆ ಪಾಠ ಕಲಿಸಿದ ಮಾಡ್ರಿಕ್

ಡಿ ಗುಂಪಿನ ಪಂದ್ಯ: ಕ್ರೊವೇಷ್ಯಾ ತಂಡಕ್ಕೆ ಜಯ

ಏಜೆನ್ಸೀಸ್
Published 17 ಜೂನ್ 2018, 18:38 IST
Last Updated 17 ಜೂನ್ 2018, 18:38 IST
ಕ್ರೊವೇಷ್ಯಾ ಪರ ಗೋಲು ಹೊಡೆದ ಲೂಕಾ ಮಾಡ್ರಿಕ್ ಅವರನ್ನು ಅಭಿನಂದಿಸಿದ ಸಹ ಆಟಗಾರ -ರಾಯಿಟರ್ಸ್‌ ಚಿತ್ರ
ಕ್ರೊವೇಷ್ಯಾ ಪರ ಗೋಲು ಹೊಡೆದ ಲೂಕಾ ಮಾಡ್ರಿಕ್ ಅವರನ್ನು ಅಭಿನಂದಿಸಿದ ಸಹ ಆಟಗಾರ -ರಾಯಿಟರ್ಸ್‌ ಚಿತ್ರ   

ಕಲಿನಿನಗ್ರಾಡ್, ರಷ್ಯಾ: ಮಿಡ್‌ಫೀಲ್ಡರ್ ಲೂಕಾ ಮಾಡ್ರಿಕ್ ಮಾಡಿದ ಮೋಡಿ ಮತ್ತು ಒಜೆನೆಕಾರೊ ಇಟೆಬೊ ನೀಡಿದ ‘ಉಡುಗೊರೆ’ ನೆರವಿನಿಂದ ಕ್ರೊವೇಷ್ಯಾ ತಂಡವು 2–0ಯಿಂದ ನೈಜೀರಿಯಾ ವಿರುದ್ಧ ಜಯಿಸಿತು.

ಭಾನುವಾರ ಬೆಳಗಿನ ಜಾವ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ನೈಜೀರಿಯಾ ತಂಡದ ಯುವಪಡೆಯು ಕ್ರೊವೇಷ್ಯಾದ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಯಿತು.

ತಂಡದ ಲೂಕಾ ಮಾಡ್ರಿಕ್ ಮತ್ತು ಇವಾನ್ ರಾಕಿಟಿಕ್ ಅವರ ಯೋಜನಾಬದ್ಧ ಆಟವು ಕಳೆಗಟ್ಟಿತು. ಇಬ್ಬರನ್ನೂ ಕಟ್ಟಿಹಾಕಲು   ನೈಜೀರಿಯಾದ ರಕ್ಷಣಾ ಪಡೆಯು ಸಾಕಷ್ಟು ಹರಸಾಹಸಪಟ್ಟಿತು. ನೈಜೀರಿಯಾ ತಂಡದ ವಿಲಿಯಂ ಕಾಂಗ್  ಅವರು ಕ್ರೊವೇಷ್ಯಾದ ಮ್ಯಾಂಡಜುಕಿಕ್ ಅವರನ್ನು ತಳ್ಳಿ ಬಿಳಿಸಿದ್ದರಿಂದ ರೆಫರಿ ಸ್ಯಾಂಡ್ರೊ ಅವರು ಕ್ರೊವೇಷ್ಯಾಕ್ಕೆ ಪೆನಾಲ್ಟಿ ನೀಡಿದರು. ಅದರಲ್ಲಿ ಮಾಡ್ರಿಕ್ ಮೋಡಿ ಮಾಡಿದರು.

ADVERTISEMENT

1998ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಕ್ರೊವೆಷ್ಯಾ ಸೆಮಿಫೈನಲ್ ಹಂತ ತಲುಪಿತ್ತು. 2014ಲ್ಲಿ ಮೊದಲ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.