ADVERTISEMENT

ಪಂದ್ಯ ಮಳೆಗೆ ಆಹುತಿ: ಸರಣಿ ಸಮ

ಪಿಟಿಐ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಮಳೆಯಿಂದ ಪಂದ್ಯ ರದ್ದಾಗುವುದಕ್ಕೂ ಮುನ್ನ ಅಂಗಣಕ್ಕೆ ಇಳಿದ ವಿರಾಟ್ ಕೊಹ್ಲಿ (ಎರಡದಿಂದ ಎರಡನೆಯವರು), ಮನೀಷ್ ಪಾಂಡೆ, ಭುವನೇಶ್ವರ್ ಕುಮಾರ್ ಮತ್ತು ಮಹೇಂದ್ರ ಸಿಂಗ್ ದೋನಿ ನಿರಾಸೆಯಿಂದ ನೋಡುತ್ತಿರುವುದು.
ಮಳೆಯಿಂದ ಪಂದ್ಯ ರದ್ದಾಗುವುದಕ್ಕೂ ಮುನ್ನ ಅಂಗಣಕ್ಕೆ ಇಳಿದ ವಿರಾಟ್ ಕೊಹ್ಲಿ (ಎರಡದಿಂದ ಎರಡನೆಯವರು), ಮನೀಷ್ ಪಾಂಡೆ, ಭುವನೇಶ್ವರ್ ಕುಮಾರ್ ಮತ್ತು ಮಹೇಂದ್ರ ಸಿಂಗ್ ದೋನಿ ನಿರಾಸೆಯಿಂದ ನೋಡುತ್ತಿರುವುದು.   

ಹೈದರಾಬಾದ್: ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಅಂತರರಾಷ್ಟ್ರೀಯ ಟಿ–20 ಪಂದ್ಯಕ್ಕೆ ಆತಿಥ್ಯ ವಹಿಸುವ ಕನಸು ಭಗ್ನಗೊಂಡಿತು.

ಧಾರಾಕಾರ ಮಳೆಯಿಂದ ಮೂರನೇ ಪಂದ್ಯವನ್ನು ರದ್ದುಗೊಳಿಸಿದ ಕಾರಣ ಸರಣಿ ಗೆಲ್ಲುವ ವಿರಾಟ್ ಕೊಹ್ಲಿ ಪಡೆಯ ಆಸೆಯೂ ಕಮರಿತು. ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಯನ್ನು ಹಂಚಿಕೊಂಡವು.

ಒಂದು ವಾರದಿಂದ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಶುಕ್ರವಾರವೂ ಮಳೆಯಾಗಿತ್ತು. ಪಂದ್ಯ ಸಂಜೆ ಏಳು ಗಂಟೆಗೆ ಆರಂಭವಾಗಬೇಕಾಗಿತ್ತು. ಅಂಗಣದಲ್ಲಿ ನೀರು ನಿಂತಿದ್ದ ಕಾರಣ 45 ನಿಮಿಷಗಳ ನಂತರ ಪರಿಶೀಲನೆ ನಡೆಸಲು ನಿರ್ಧರಿಸಲಾಯಿತು.

ADVERTISEMENT

ಪರಿಶೀಲನೆಯ ನಂತರವೂ ಪಂದ್ಯ ಆರಂಭಿಸಲು ಆಗಲಿಲ್ಲ. ಟಾಸ್ ಕೂಡ ಆಗಿರಲಿಲ್ಲ. ನಂತರ ಅನೇಕ ಬಾರಿ ಪರಿಶೀಲನೆ ನಡೆಸಿ ಕೊನೆಗೆ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ರಾಂಚಿಯಲ್ಲಿ ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತ್ತು.

ಗುವಾಹಟಿಯಲ್ಲಿ ನಡೆದ ಪಂದ್ಯವನ್ನು ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಗೆದ್ದ ಸೇಡು ತೀರಿಸಿತ್ತು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 4–1ರ ಗೆಲುವು ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.