ADVERTISEMENT

ಪುಟಿದೆದ್ದ ಸಚಿನ್, ಭಾರತಕ್ಕೆ ಅಲ್ಪ ನಿರಾಳ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2013, 11:31 IST
Last Updated 23 ಫೆಬ್ರುವರಿ 2013, 11:31 IST
ಪುಟಿದೆದ್ದ ಸಚಿನ್, ಭಾರತಕ್ಕೆ ಅಲ್ಪ ನಿರಾಳ
ಪುಟಿದೆದ್ದ ಸಚಿನ್, ಭಾರತಕ್ಕೆ ಅಲ್ಪ ನಿರಾಳ   

ಚೆನ್ನೈ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 380ರನ್‌ಗಳಿಗೆ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಿ ಬ್ಯಾಟಿಂಗ್ ಆರಂಭಿಸಿದ ಭಾರತ ತನ್ನೆರಡು ವಿಕೆಟ್‌ಗಳನ್ನು ಬಹುಬೇಗನೆ ಕಳೆದುಕೊಂಡಿತು. ಮುರಳಿ ವಿಜಯ್ ಹಾಗೂ ವಿರೇಂದ್ರಸೆಹ್ವಾಗ್ ಅವರು ಪೆವಿಲಿಯನ್‌ಗೆ ತೆರಳಿದಾಗ ಭಾರತದ ಮೇಲೆ ಆತಂಕದ ಕಾರ್ಮೋಡ ಆವರಿಸಿತ್ತು. ಆದರೆ ಸಚಿನ್ ಹಾಗೂ ಪೂಜಾರ್ ಅವರ ಸಮಯೋಚಿತ ಆಟದಿಂದಾಗಿ ಭಾರತ ಚೇತರಿಕೆಯನ್ನು ಕಂಡಿತು. 44 ರನ್ ಗಳಿಸಿ ಪೂಜಾರ್ ಪೆವಿಲಿಯನ್‌ಗೆ ತೆರಳಿದ ನಂತರ ಬಂದ ವಿರಾಟ್ ಕೊಹ್ಲಿ ಸಹ ಅರ್ಧಶತಕ ಗಳಿಸಿ ಅಜೇಯರಾಗುಳಿದರು. ಅತ್ತ ಕಡೆ ತಾಳ್ಮೆಯ ಆಟ ಪ್ರದರ್ಶಿಸಿದ ಸಚಿನ್ 70 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.

2ನೇ ದಿನದಾಟದಂತ್ಯಕ್ಕೆ ಭಾರತ ಮೂರು ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದೆ. ಭಾರತದ ಪರ ಅಶ್ವಿನ್ 7 ವಿಕೆಟ್ ಪಡೆದುಕೊಂಡು ಯಶಸ್ವಿ ಬೌಲರ್ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.