ADVERTISEMENT

ಪುಲಿಯಂಡ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST

ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಉತ್ಸವದಲ್ಲಿ ಗುರುವಾರ, ಪುಲಿಯಂಡ ತಂಡವು ತನ್ನೀರ ತಂಡವನ್ನು 5–0 ಅಂತರದಲ್ಲಿ ಸೋಲಿಸಿತು.

ಪುಲಿಯಂಡ ಪರ ತಿಮ್ಮಯ್ಯ 3, ಪೊನ್ನಪ್ಪ ಹಾಗೂ ಮುದ್ದಪ್ಪ ತಲಾ ಒಂದೊಂದು ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು.

ಅರೆಯಡ ತಂಡವು ಕೇಳಪಂಡ ತಂಡವನ್ನು 4–1 ಅಂತರದಲ್ಲಿ ಮಣಿಸಿತು. ಅರೆಯಡ ಪರ ಸನ್ನು ಚಿಣ್ಣಪ್ಪ ಮೂರು, ಗಣೇಶ್‌ ಬೆಳ್ಯಪ್ಪ ಒಂದು ಗೋಲು ಗಳಿಸಿ ವಿಜಯಕ್ಕೆ ಕಾರಣರಾದರು. ತೀತಿರಮಾಡ ವಿರುದ್ಧ ಚೆಯ್ಯಂಡ ತಂಡವು 3–1 ಅಂತರದಲ್ಲಿ ಗೆದ್ದಿತು.

ADVERTISEMENT

ಅಪ್ಪಚ್ಚೀರ ಮತ್ತು ಚಿಂಡಮಾಡ ತಂಡಗಳು ನಿಗದಿತ ಅವಧಿಯಲ್ಲಿ 1–1 ಗೋಲಿನಲ್ಲಿ ಸಮಬಲ ಸಾಧಿಸಿದವು. ಟೈಬ್ರೇಕರ್‌ನಲ್ಲಿ 5– 4 ಗೋಲುಗಳಿಂದ ಅಪ್ಪಚ್ಚಿರ ತಂಡವು ವಿಜಯದ ನಗೆ ಬೀರಿತು. ತಿರೋಡಿರ ತಂಡದ ವಿರುದ್ಧ ತಾಪಂಡ ತಂಡವು (2–0) ಗೆದ್ದಿತು. ತಾಪಂಡ ಪರ ಅವಿನ್‌ ಸಂಜು ಎರಡು ಗೋಲು ಹೊಡೆದು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.