ADVERTISEMENT

ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್‌ ಸೇರ್ಪಡೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ಕ್ವಾಲಾಲಂಪುರ (ಐಎಎನ್‌ಎಸ್): ಪ್ಯಾರಾಬ್ಯಾಡ್ಮಿಂಟನ್‌ ಅನ್ನು 2020 ರಲ್ಲಿ ನಡೆಯುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡ ಬೇಕೆಂದು ಒತ್ತಾಯಿಸಿ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ (ಬಿಡಬ್ಲ್ಯುಎಫ್‌), ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿಗೆ (ಐಪಿಸಿ) ಮನವಿ ಮಾಡಿದೆ.

ಈ ಮೊದಲು ಬಿಡಬ್ಲ್ಯುಎಫ್‌ 2016ರ ರಿಯೊ ಪ್ಯಾರಾಲಿಂಪಿಕ್ಸ್ಸ್‌ಲ್ಲಿ ಈ ಆಟವನ್ನು ಸೇರಿಸಲು ಪ್ರಯತ್ನಿಸಿ ವಿಫಲಗೊಂಡಿತ್ತು.  ನವೆಂ ಬರ್‌ನಲ್ಲಿ ಐಪಿಸಿ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಈ ಬಗ್ಗೆ ಚರ್ಚೆ ನಡೆಯಲಿದೆ.

‘ಪ್ಯಾರಾ ಬ್ಯಾಡ್ಮಿಂಟನ್ ಅನ್ನು ಅಭಿವೃದ್ಧಿಪಡಿಸಲು ಬಿಡಬ್ಲ್ಯುಎಫ್‌ ಕಠಿಣ ಪರಿಶ್ರಮಪಡುತ್ತಿದೆ. ಐಪಿಸಿಗೆ ಪತ್ರ ನೀಡಿದ ಬೆನ್ನಲ್ಲೇ ನಾವು  ಸಿದ್ಧತೆಗಳನ್ನು ಆರಂಭಿಸಿದ್ದು, ಐಪಿಸಿಗೆ ಮನವಿ ಮಾಡಲು ಇದು ಸೂಕ್ತ ಸಮಯ ಎಂದು ಭಾವಿಸಿದ್ದೇವೆ’ ಎಂದು ಬಿಡಬ್ಲ್ಯುಎಫ್‌ ಅಧ್ಯಕ್ಷ ಪೌಲ್ ಎರಿಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.