ADVERTISEMENT

ಪ್ರಶಸ್ತಿಯ ನಿರೀಕ್ಷೆಯಲ್ಲಿ ಜಯರಾಮ್‌

ಅಮೆರಿಕ ಓಪನ್‌ ಬ್ಯಾಂಡ್ಮಿಟನ್‌: ಹಿಂದೆ ಸರಿದ ಕಶ್ಯಪ್‌

ಪಿಟಿಐ
Published 11 ಜೂನ್ 2018, 19:30 IST
Last Updated 11 ಜೂನ್ 2018, 19:30 IST
ಅಜಯ್‌ ಜಯರಾಮ್‌
ಅಜಯ್‌ ಜಯರಾಮ್‌   

ಫುಲ್ಲೆರ್‌ಟೊನ್‌, ಅಮೆರಿಕ: ಭಾರತದ ಅಜಯ್‌ ಜಯರಾಮ್‌ ಅವರು ಮಂಗಳವಾರದಿಂದ ನಡೆಯುವ ಅಮೆರಿಕ ಓಪನ್‌ ವಿಶ್ವ ಟೂರ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ವಿಶ್ವಾಸ ಹೊಂದಿದ್ದಾರೆ.

ಹಾಲಿ ಚಾಂಪಿಯನ್‌ ಎಚ್‌.ಎಸ್‌.ಪ್ರಣಯ್‌ ಮತ್ತು 2016ರಲ್ಲಿ ಫೈನಲ್‌ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್‌ ಈ ಬಾರಿ ಟೂರ್ನಿಯಲ್ಲಿ ಆಡುತ್ತಿಲ್ಲ.

ಮಲೇಷ್ಯಾ ಓಪನ್‌, ಇಂಡೊನೇಷ್ಯಾ ಓಪನ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಪ್ರಣಯ್‌ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ADVERTISEMENT

ಈ ವರ್ಷದ ಫೆಬ್ರುವರಿಯಲ್ಲಿ ನಡೆದಿದ್ದ ಆಸ್ಟ್ರಿಯಾ ಓಪನ್‌ ವೇಳೆ ಗಾಯಗೊಂಡಿದ್ದ ಕಶ್ಯಪ್‌, ಇದರಿಂದ ಇನ್ನೂ ಚೇತರಿಸಿಕೊಂಡಿಲ್ಲ.

ಜಯರಾಮ್‌ ಅವರು ಮೊದಲ ಸುತ್ತಿನಲ್ಲಿ ಅರ್ಹತಾ ಹಂತದಲ್ಲಿ ಗೆದ್ದು ಬಂದ ಆಟಗಾರನ ವಿರುದ್ಧ ಸೆಣಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಅನುರಾ ಪ್ರಭು ದೇಸಾಯಿ ಭಾರತದ ಭರವಸೆಯಾಗಿದ್ದಾರೆ. ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಅನುರಾ, ಕೆನಡಾದ ರಚೆಲ್‌ ಹೊಂಡೆರಿಚ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ವೈಷ್ಣವಿ ರೆಡ್ಡಿ ಜಕ್ಕಾ ಅವರಿಗೆ ಜಪಾನ್‌ನ ಆಟಗಾರ್ತಿ ಸಯಾಕ ಸ್ಯಾಟೊ ಸವಾಲು ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.