ADVERTISEMENT

ಪ್ರಶಸ್ತಿ ಮೇಲೆ ಪ್ರಣೀತ್ ಕಣ್ಣು

ಇಂದಿನಿಂದ ಇಂಡೊನೇಷ್ಯಾ ಬ್ಯಾಡ್ಮಿಂಟನ್‌

ಪಿಟಿಐ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ಭಾರತದ ಬಿ. ಸಾಯಿಪ್ರಣೀತ್‌
ಭಾರತದ ಬಿ. ಸಾಯಿಪ್ರಣೀತ್‌   

ಜಕಾರ್ತ: ಹೋದ ವಾರವಷ್ಟೇ ಥಾಯ್ಲೆಂಡ್ ಓಪನ್‌ ಗೆದ್ದು ವಿಶ್ವಾಸ ದಲ್ಲಿರುವ ಭಾರತದ ಬಿ.ಸಾಯಿ ಪ್ರಣೀತ್‌ ಸೋಮವಾರದಿಂದ ಇಲ್ಲಿ ಆರಂಭವಾಗ ಲಿರುವ ಇಂಡೊನೇಷ್ಯಾ ಸೂಪರ್ ಸೀರಿಸ್‌ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ  ಪ್ರಶಸ್ತಿ ಎತ್ತಿಹಿಡಿಯುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

24 ವರ್ಷದ ಆಟಗಾರ ಏಪ್ರಿಲ್‌ನಲ್ಲಿ ಸಿಂಗಪುರ ಓಪನ್ ಸೀರಿಸ್ ಜಯಿಸಿದ್ದರು. ಮೊದಲ ಪಂದ್ಯದಲ್ಲಿ ಕೊರಿಯಾದ ಸೊನ್ ವಾನ್ ಹೊ ಎದುರು ಆಡಲಿರುವ ಪ್ರಣೀತ್‌ ಇಲ್ಲಿ ಶುಭಾರಂಭ ಮಾಡುವ ನಿರೀಕ್ಷೆ ಹೊಂದಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಮಹಿಳೆ ಯರ ಸಿಂಗಲ್ಸ್ ವಿಭಾಗದಲ್ಲಿ ಇತಿಹಾಸ ಸೃಷ್ಟಿಸಿದ್ದ ಪಿ.ವಿ ಸಿಂಧು ಕೂಡ ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.

ಸೈಯದ್ ಮೋದಿ ಗ್ರ್ಯಾಂಡ್‌ ಪ್ರಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಸಿಂಧು ಮಲೇಷ್ಯಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದರು.
ಇಲ್ಲಿನ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಥಾಯ್ಲೆಂಡ್‌ನ ಪೋರ್ನಪವೆ ಚೊಚುವಾಂಗ್ ಎದುರು ಆಡಲಿದ್ದಾರೆ.

ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್‌ ಮೊದಲ ಪಂದ್ಯದಲ್ಲಿ ಕಠಿಣ ಎದುರಾಳಿ ಥಾಯ್ಲೆಂಡ್‌ನ ರಾಚ ನಕ್ ಇಂತನಾನ್ ಅವರನ್ನು ಎದು ರಿಸಲಿದ್ದಾರೆ.

ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಸೈನಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಕಳೆದ ಏಳು ವರ್ಷ ಗಳಲ್ಲಿ ಅವರು ಪಡೆದ ಅತಿ ಕಡಿಮೆ ರ‍್ಯಾಂಕಿಂಗ್ ಇದಾಗಿದೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಜಯ್‌ ಜಯರಾಮ್ ತಮ್ಮ ಮೊದಲ ಪಂದ್ಯದಲ್ಲಿ ಇಂಡೊನೇಷ್ಯಾದ ಜೊನಾ ಥನ್ ಕ್ರಿಸ್ಟಿ ಎದುರು ಆಡಲಿದ್ದಾರೆ.
ಕಿದಂಬಿ ಶ್ರೀಕಾಂತ್ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ವಿರುದ್ಧವೂ ಸಮೀರ್ ವರ್ಮಾ ನಾಲ್ಕನೇ ಶ್ರೇಯಾಂ ಕದ ಡೇನ್ ಜಾನ್‌ ಒ ಜೋರ್ಗನ್‌ಸನ್ ಮೇಲೆ ಆಡಲಿದ್ದಾರೆ.

ಎಚ್‌.ಎಸ್‌. ಪ್ರಣಯ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಜುಲ್ಫದ್ಲಿ ಜುಲ್ಕಿಫ್ಲಿ ವಿರುದ್ಧ ಆಡಲಿದ್ದಾರೆ. ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಚೀನಾ ತೈಪೆಯ ಜೋಡಿ ಚು ಚಿಂಗ್‌ ಯಾವೊ ಮತ್ತು ಯಾಂಗ್‌ ಪೊ ಹಾನ್ ಎದುರು ಸೆಣಸಲಿದ್ದಾರೆ.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸುಮೀತ್‌ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ ಜೋಡಿ ಮಿಶ್ರ ಡಬಲ್ಸ್ ಹಾಗೂ ಸಿಕ್ಕಿ ಮತ್ತು ಅಶ್ವಿನಿ ಮಹಿಳೆಯರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.