ADVERTISEMENT

ಪ್ರೀತಿಯ ಧಾರೆಯೆರೆದ ಮರ್ಫಿ ಟೌನ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST

ಬೆಂಗಳೂರು: ಭಾನುವಾರ ಸಂಜೆ ಮಳೆ ಇರಲಿಲ್ಲ. ಆದರೆ ಮರ್ಫಿ ಟೌನ್‌ನಲ್ಲಿ ಸಂಭ್ರಮದ ಹೊಳೆ ಹರಿದಿತ್ತು. ಪಟಾಕಿಗಳ ಸದ್ದು, ಬ್ಯಾಂಡ್‌ಗಳ ಅಬ್ಬರ, ವೇಷಧಾರಿ  ಕಲಾವಿದರ ನೃತ್ಯದ ಸೊಬಗು ಪಸರಿಸಿತ್ತು.

ಫಿಫಾ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನ್ನು ಪ್ರತಿನಿಧಿಸಿದ್ದ ಇಲ್ಲಿಯ ಇಬ್ಬರು ಆಟಗಾರರನ್ನು ಸನ್ಮಾ ನಿಸಿ ಮೆರವಣಿಗೆ ಮಾಡಿದ ಸಂದರ್ಭ ಅದು. ಇಲ್ಲಿಯ ಸಂಜೀವ್ ಸ್ಟಾಲಿನ್ ಮತ್ತು ಹೆನ್ರಿ ಅಂಥೋಣಿ ಅವರನ್ನು ತೆರೆದ ವಾಹನದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆ ಸಂದ ರ್ಭದಲ್ಲಿ ಹಿರಿಯರು, ಮಕ್ಕಳು ಬಂದು ಆಟಗಾರರ ಕೈಕುಲುಕಿ ಅಭಿನಂದಿಸಿದರು.

ಈ ಪ್ರದೇಶದ ಆಯಕಟ್ಟಿನ ಸ್ಥಳಗಳಲ್ಲಿ  ಈ ಆಟಗಾರರ ದೊಡ್ಡ ಕಟೌಟ್‌ಗಳು, ಹೋರ್ಡಿಂಗ್‌ಗಳು ಮತ್ತು ಅಭಿನಂದನೆಯ ಬ್ಯಾನರ್‌ ಗಳು ರಾರಾಜಿಸಿದವು.

ADVERTISEMENT

ಹೆನ್ರಿ ಮತ್ತು ಸಂಜೀವ್ ಅವರು ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬೆಂಗಳೂರಿನ ಕ್ಲಬ್‌ಗಳಿಗೆ ಹೆಚ್ಚು ಆಡಿಲ್ಲ. ಆದರೆ ಅವರ ಕುಟುಂಬಗಳು ಇಲ್ಲಿಯೇ ನೆಲೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.