ADVERTISEMENT

ಪ್ರೊ ಕಬಡ್ಡಿ: ಗುಜರಾತ್‌–ಪಲ್ಟನ್ ಹಣಾಹಣಿ

ಪಿಟಿಐ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST
ತವರಿನ ಅಂಗಳದಲ್ಲಿ ಶುಕ್ರವಾರ ನಡೆಯಲಿರುವ ಪ್ರೊ ಕಬಡ್ಡಿ ಐದನೇ ಆವೃತ್ತಿಯ ಕೊನೆಯ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವು (ಕೇಸರಿ ಪೋಷಾಕು) ತಂಡವು ಗೆಲುವಿನ ನಿರೀಕ್ಷೆಯಲ್ಲಿದೆ.
ತವರಿನ ಅಂಗಳದಲ್ಲಿ ಶುಕ್ರವಾರ ನಡೆಯಲಿರುವ ಪ್ರೊ ಕಬಡ್ಡಿ ಐದನೇ ಆವೃತ್ತಿಯ ಕೊನೆಯ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವು (ಕೇಸರಿ ಪೋಷಾಕು) ತಂಡವು ಗೆಲುವಿನ ನಿರೀಕ್ಷೆಯಲ್ಲಿದೆ.   

ಪುಣೆ (ಪಿಟಿಐ): ಪ್ರೊ ಕಬಡ್ಡಿ ಐದನೇ ಆವೃತ್ತಿಯ ಲೀಗ್ ಪಂದ್ಯಗಳ ಕೊನೆಯ ದಿನದ  ಎರಡು ಪಂದ್ಯಗಳು ಶುಕ್ರವಾರ ನಡೆಯಲಿವೆ.

ಆತಿಥೇಯ ಪುಣೇರಿ ಪಲ್ಟನ್ಸ್‌ ತಂಡವು ಗುಜರಾತ್ ಫಾರ್ಚೂನ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್‌  ತಂಡವು ಬೆಂಗಾಲ್ ವಾರಿಯರ್ಸ್‌ ವಿರುದ್ಧ ಕಣಕ್ಕಿಳಿ
ಯಲಿದೆ.

ಎ ಗುಂಪಿನಲ್ಲಿ  ಫಾರ್ಚೂನ್‌ಜೈಂಟ್ಸ್‌ ತಂಡವು 21 ಪ‍ಂದ್ಯಗಳಿಂದ 82 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದೆ. ಪುಣೇರಿ ತಂಡದ ವಿರುದ್ಧ ಜಯಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಛಲದಲ್ಲಿದೆ. ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಆಡುತ್ತಿರುವ ತಂಡವು ಪ್ಲೇಆಫ್‌ ಹಂತ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. 79 ಅಂಕಗಳನ್ನು ಗಳಿಸಿರುವ ಪುಣೇರಿ ತಂಡವು ಎರಡನೇ ಸ್ಥಾನದಲ್ಲಿದೆ. ತವರಿನ ಅಭಿಮಾನಿಗಳ ಎದುರು ಗೆದ್ದು ಗುಜರಾತ್ ತಂಡವನ್ನು ಹಿಂದಿಕ್ಕುವತ್ತ ಗುರಿ ನೆಟ್ಟಿದೆ.

ADVERTISEMENT

ಎ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಗಳಿಸುವ ತಂಡಗಳು ಪ್ಲೇ ಆಫ್‌ ಹಂತ ಪ್ರವೇಶಿಸಲಿವೆ. ಮೊದಲ ಸ್ಥಾನದ, ಬೆಂಗಾಲ್ ವಾರಿಯರ್ಸ್ ತಂಡವನ್ನು; ಎರಡನೇ ಸ್ಥಾನ ಪಡೆಯುವ ತಂಡವು. ಯು.ಪಿ ಯೋಧಾ ತಂಡವನ್ನು ಹಾಗೂ ಮೂರನೇ ಸ್ಥಾನ ಪಡೆಯುವ ತಂಡವು ಪಟ್ನಾ ಪೈರೆಟ್ಸ್‌ ತಂಡವನ್ನು ಎದುರಿಸಲಿವೆ. ಅ. 23 ಮತ್ತು 24ರಂದು ಪ್ಲೇ ಆಫ್ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.

ಪಂದ್ಯ ಆರಂಭ: ರಾತ್ರಿ 8ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.