ADVERTISEMENT

ಫಹೀಮ್‌ ಅಶ್ರಫ್‌ ‘ಹ್ಯಾಟ್ರಿಕ್‌’ ಮೋಡಿ

ಶ್ರೀಲಂಕಾ ವಿರುದ್ಧದ ಎರಡನೇ ಟಿ–20 ಪಂದ್ಯ; ಪಾಕಿಸ್ತಾನಕ್ಕೆ ಗೆಲುವು

ಏಜೆನ್ಸೀಸ್
Published 28 ಅಕ್ಟೋಬರ್ 2017, 20:43 IST
Last Updated 28 ಅಕ್ಟೋಬರ್ 2017, 20:43 IST
ಫಹೀಮ್‌ ಅಶ್ರಫ್‌ ‘ಹ್ಯಾಟ್ರಿಕ್‌’ ಮೋಡಿ
ಫಹೀಮ್‌ ಅಶ್ರಫ್‌ ‘ಹ್ಯಾಟ್ರಿಕ್‌’ ಮೋಡಿ   

ಅಬುಧಾಬಿ (ಎಎಫ್‌ಪಿ): ಫಹೀಮ್‌ ಅಶ್ರಫ್‌ (16ಕ್ಕೆ3) ‘ಹ್ಯಾಟ್ರಿಕ್‌’ ಮೋಡಿ ಮತ್ತು ಶಾದಾಬ್‌ ಖಾನ್‌ (14ಕ್ಕೆ1 ಹಾಗೂ ಔಟಾಗದೆ 16; 8ಎ, 1ಬೌಂ, 1ಸಿ) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಪಾಕಿಸ್ತಾನ ತಂಡ ಶ್ರೀಲಂಕಾ ಎದುರಿನ ಎರಡನೇ ಟಿ–20 ಪಂದ್ಯದಲ್ಲಿ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಲಂಕಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 124ರನ್ ಗಳಿಸಿತು. ಗುರಿ ಬೆನ್ನಟ್ಟಿದ ಸರ್ಫರಾಜ್‌ ಅಹ್ಮದ್‌ ಬಳಗ 19.5 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಫಹೀಮ್‌ ‘ಹ್ಯಾಟ್ರಿಕ್‌‘: ಶೇಖ್‌ ಜೈದ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಫಹೀಮ್‌ ವಿಶಿಷ್ಠ ಸಾಧನೆ ಮಾಡಿದರು. ಅವರು ಟಿ–20 ಮಾದರಿಯಲ್ಲಿ ‘ಹ್ಯಾಟ್ರಿಕ್‌’ ವಿಕೆಟ್‌ ಪಡೆದ ಪಾಕಿಸ್ತಾನದ ಮೊದಲ ಬೌಲರ್ ಎನಿಸಿದರು.

ADVERTISEMENT

19ನೇ ಓವರ್‌ನ ನಾಲ್ಕು, ಐದು ಮತ್ತು ಆರನೇ ಎಸೆತಗಳಲ್ಲಿ ಅವರು ಕ್ರಮವಾಗಿ ಇಸುರು ಉಡಾನ, ಮಾಹೇಲ ಉಡವಟ್ಟೆ ಮತ್ತು ದಸುನ್‌ ಶನಕ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.