ADVERTISEMENT

ಫಾರ್ಮುಲಾ ಒನ್‌: ಸಿದ್ಧತೆ ಆರಂಭ

ರಾಯಿಟರ್ಸ್
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಲೂವಿಸ್ ಹ್ಯಾಮಿಲ್ಟನ್‌ ಅವರ ಕಾರನ್ನು ಎಂಜಿನಿಯರ್‌ಗಳು ಪರೀಕ್ಷಿಸಿದರು. –ರಾಯಿಟರ್ಸ್ ಚಿತ್ರ
ಲೂವಿಸ್ ಹ್ಯಾಮಿಲ್ಟನ್‌ ಅವರ ಕಾರನ್ನು ಎಂಜಿನಿಯರ್‌ಗಳು ಪರೀಕ್ಷಿಸಿದರು. –ರಾಯಿಟರ್ಸ್ ಚಿತ್ರ   

ಲಂಡನ್‌: ಈ ಬಾರಿಯ ಫಾರ್ಮುಲಾ ಒನ್‌ ಋತುವಿನ ಪೂರ್ವ ಅಭ್ಯಾಸ ಅನೇಕ ಹೊಸತನಗಳಿಗೆ ಸಾಕ್ಷಿಯಾಗಲಿದ್ದು ಕ್ರೀಡಾಪಟುಗಳು ಈ ಸವಾಲನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ನಾಲ್ಕು ಬಾರಿಯ ಚಾಂಪಿಯನ್‌ ಲೂವಿಸ್ ಹ್ಯಾಮಿಲ್ಟನ್‌ ಹೊಸ ವಿನ್ಯಾಸದೊಂದಿಗೆ ಟ್ರ್ಯಾಕ್‌ಗೆ ಇಳಿಯಲಿರುವ ತಮ್ಮ ವಾಹನ ಕಳೆದ ಬಾರಿಯ ವಾಹನದ ಪ್ರತಿರೂಪ ಎಂದು ಹೇಳಿದ್ದಾರೆ. ಮಾರ್ಚ್‌ 25ರಂದು ನಡೆಯಲಿರುವ ಸ್ಪರ್ಧೆಯಲ್ಲಿ ಗೆಲ್ಲುವ ಭರವಸೆ ಹೊಂದಿರುವ ಅವರು ಹೊಸ ಟ್ರ್ಯಾಕ್‌ ಮತ್ತು ಭಾರಿ ಕಾರುಗಳು ಸ್ಪರ್ಧೆಯನ್ನು ರೋಚಕವಾಗಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾರ್ಸಿಲೋನಾದಲ್ಲಿ ಗುರುವಾರ ನಡೆದ ಸರ್ಕಿಟ್ ಡಿ ಕ್ಯಾಟಲೂನಿಯಾದ ಮೊದಲ ನಾಲ್ಕು ದಿನ ಅತ್ಯಂತ ವೇಗದ ಚಾಲಕ ಎಂದೆನಿಸಿಕೊಂಡಿದ್ದ ಹ್ಯಾಮಿಲ್ಟನ್‌ ಬುಧವಾರ ಹಿಮ ಮತ್ತು ಮಳೆಯಿಂದ ಉಂಟಾದ ದುರ್ಗಮ ಪರಿಸ್ಥಿತಿಯನ್ನು ಮೀರಿ ನಿಂತಿದ್ದರು. ಎರಡನೇ ಮತ್ತು ಅಂತಿಮ ಅಭ್ಯಾಸ ಸ್ಪರ್ಧೆ ಮುಂದಿನ ಮಂಗಳವಾರ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.