ADVERTISEMENT

ಫಿಫಾ ರ್‍ಯಾಂಕಿಂಗ್‌: ಭಾರತಕ್ಕೆ 152ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ):  ಅಂತರ ರಾಷ್ಟ್ರೀಯ ಫುಟ್‌ಬಾಲ್‌ ಸಂಸ್ಥೆ ಫಿಪಾ ಪ್ರಕಟಿಸಿರುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಅಲ್ಪ ಪ್ರಗತಿ ಸಾಧಿಸಿದೆ. ಎರಡು ಸ್ಥಾನ ಮೇಲೇರಿದ್ದು 152ನೇ ರ್‍ಯಾಂಕ್ ಹೊಂದಿದೆ.

ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ಭಾರತ 2–2 ಗೋಲುಗಳಿಂದ ಬಾಂಗ್ಲಾ ದೇಶ ಎದುರು ಡ್ರಾ ಮಾಡಿಕೊಂಡಿತ್ತು. ಆ ಪಂದ್ಯದಿಂದ ಭಾರತಕ್ಕೆ 43 ಪಾಯಿಂಟ್‌ಗಳು ಲಭಿಸಿದ್ದವು.

ದಕ್ಷಿಣ ಏಷ್ಯಾದಲ್ಲಿ ಅತಿ ಹೆಚ್ಚಿನ ರ್‍ಯಾಂಕ್‌ ಹೊಂದಿರುವ ತಂಡ ಆಫ್ಘಾನಿಸ್ತಾನ. ಫಿಫಾ ರ್‍ಯಾಂಕಿಂಗ್‌ನಲ್ಲಿ ಈ ತಂಡ  127ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.