ADVERTISEMENT

ಫುಟ್‌ಬಾಲ್‌: ನೇಮರ್‌ ಮತ್ತೆ ಅಂಗಳಕ್ಕೆ?

ಏಜೆನ್ಸೀಸ್
Published 4 ಮೇ 2018, 19:30 IST
Last Updated 4 ಮೇ 2018, 19:30 IST
ನೇಮರ್‌
ನೇಮರ್‌   

ಪ್ಯಾರಿಸ್‌ (ಎಎಫ್‌ಪಿ): ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬ್ರೆಜಿಲ್‌ ಫುಟ್‌ಬಾಲ್‌ ತಂಡದ ಆಟಗಾರ ನೇಮರ್‌ ಅವರು ಪ್ಯಾರಿಸ್‌ ಸೇಂಟ್‌ ಜರ್ಮೈನ್‌ ಕ್ಲಬ್‌ನಲ್ಲಿ (ಪಿಎಸ್‌ಜಿ) ಆಡಲು ಪ್ಯಾರಿಸ್‌ಗೆ ಬರುವ ಸಾಧ್ಯತೆ ಇದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದರಿಂದ ಮುಂದಿನ ತಿಂಗಳು ಆರಂಭವಾಗಲಿರುವ ಫಿಫಾ ವಿಶ್ವಕಪ್‌ನಲ್ಲಿ ಅವರು ಆಡುವ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.

ಫೆಬ್ರುವರಿ 25ರಂದು ಪ್ಯಾರಿಸ್ ಸೇಂಟ್‌ ಜರ್ಮೈನ್‌ ತಂಡದಲ್ಲಿ ಆಡುತ್ತಿದ್ದ ವೇಳೆ ಅವರ ಬಲಗಾಲಿನ ಪಾದದ ಮೂಳೆ ಮುರಿದಿತ್ತು. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರ ನಂತರ ಅವರು ಮುಂದಿನ ವಿಶ್ವಕಪ್‌ನಲ್ಲಿ ಆಡುವುದರ ಬಗ್ಗೆ ಅನುಮಾನ ಮೂಡಿತ್ತು.

ADVERTISEMENT

‘ನಾನು ಕೆಲವು ವಾರಗಳಿಂದ ನೇಮರ್‌ ಜೊತೆ ಮಾತನಾಡಿಲ್ಲ. ಅವರ ಅನುಪಸ್ಥಿತಿಯಲ್ಲಿ ತಂಡವು ಫ್ರೆಂಚ್‌ ಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ನಡೆಯುವ ಈ ಪಂದ್ಯಕ್ಕಾದರೂ ಅವರು ತಂಡದಲ್ಲಿರಬೇಕೆಂದು ನಾವೆಲ್ಲ ಬಯಸುತ್ತಿದ್ದೇವೆ. ಇಲ್ಲಿಗೆ ಬಂದ ಕೂಡಲೇ ಅವರನ್ನು ಫಿಸಿಯೋಗಳು ಪರೀಕ್ಷಿಸಲಿದ್ದಾರೆ’ ಎಂದು ಪ್ಯಾರಿಸ್‌ ಸೇಂಟ್‌ ಜರ್ಮೈನ್‌ ತಂಡದ ಕೋಚ್‌ ಉನೈ ಎಮೆರಿ ಹೇಳಿದ್ದಾರೆ.

ನೇಮರ್‌ ಅವರ ಅನುಪಸ್ಥಿತಿಯಲ್ಲಿ ಪಿಎಸ್‌ಜಿ ತಂಡವು ಚಾಂಪಿಯನ್ಸ್‌ ಲೀಗ್‌ನಲ್ಲಿ ರಿಯಲ್‌ ಮ್ಯಾಡ್ರಿಡ್‌ ವಿರುದ್ಧ ಸೋಲು ಅನುಭವಿಸಿತ್ತು. ಆದರೆ, ಫ್ರೆಂಚ್‌ ಲೀಗ್‌ ಹಾಗೂ ಲೀಗ್‌ ಕಪ್‌ ಅನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.