ADVERTISEMENT

ಫುಟ್‌ಬಾಲ್‌: ಬೆಂಗಳೂರು ವಾರಿಯರ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST

ಬೆಂಗಳೂರು: ಕ್ಸೇವಿಯರ್‌ ವಿಜಯಕುಮಾರ್‌ ಅವರ ಅಮೋಘ ಮೂರು ಗೋಲುಗಳ ನೆರವಿನಿಂದ ಬೆಂಗಳೂರು ವಾರಿಯರ್ಸ್‌ ಎಫ್‌ಸಿ ತಂಡವು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಪಂದ್ಯದಲ್ಲಿ ಗೆದ್ದಿದೆ.

ಮಂಗಳವಾರ ನಡೆದ ‍ಪಂದ್ಯದಲ್ಲಿ ಬೆಂಗಳೂರು ವಾರಿಯರ್ಸ್‌ ಎಫ್‌ಸಿ ತಂಡವು ಯುಎಫ್‌ಎ ಬಾನಸವಾಡಿ ಎಫ್‌ಸಿ ತಂಡವನ್ನು 4–0 ಗೋಲು
ಗಳಿಂದ ಮಣಿಸಿತು.

ವಿಜಯೀ ತಂಡದ ಪರವಾಗಿ ಕ್ಸೇವಿಯರ್‌ ವಿಜಯಕುಮಾರ್‌ ಅವರು ಮೂರು (2, 31, 34ನೇ ನಿ.) ಹಾಗೂ ಮೊನೀಶ್‌ (23ನೇ ನಿ.) ಒಂದು ಗೋಲು ದಾಖಲಿಸಿದರು.

ADVERTISEMENT

ಟೊರ್ನಾಡೋಸ್‌ ಎಫ್‌ಸಿ ತಂಡವು ಯಂಗ್‌ ಜೆಮ್ಸ್‌ ತಂಡವನ್ನು 4–0 ಗೋಲುಗಳಿಂದ ಸೋಲಿಸಿತು. ಟೊರ್ನಾಡೋಸ್‌ ತಂಡದ ಸ್ಟೀಫನ್‌ ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ರಾಬರ್ಸನ್‌ ಹಾಗೂ ಸುನಿಲ್‌ ತಲಾ ಒಂದು ಗೋಲು ದಾಖಲಿಸಿದರು.

ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಯಲ್ಲೋಸ್‌ ಎಫ್‌ಸಿ ತಂಡವು ಯಂಗ್‌ ಮುಸ್ಲಿಮ್ಸ್‌ ಎಫ್‌ಸಿ ತಂಡದ ವಿರುದ್ಧ 2–1 ಗೋಲುಗಳಿಂದ ಜಯಿಸಿತು. ವಿಜಯೀ ತಂಡದ ಫನ್ಲಸಾನ್‌ ಹಾಗೂ ಸ್ಟೀಫನ್‌ ತಲಾ ಒಂದು ಗೋಲು ಗಳಿಸಿದರು. ಯಂಗ್‌ ಮುಸ್ಲಿಮ್ಸ್‌ ಎಫ್‌ಸಿಯ ವಿಘ್ನೇಶ್‌ ಧ್ರುವ ಒಂದು ಗೋಲು ದಾಖಲಿಸಿದರು.

ಎಚ್‌ಎಎಲ್‌ ಎಫ್‌ಸಿ ತಂಡವು ಮುಸ್ಲಿಮ್ಸ್‌ ಹಿರೋಸ್‌ ಎಫ್‌ಸಿ ತಂಡದ ಜೊತೆ 1–1 ಗೋಲುಗಳ ಡ್ರಾ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.