ADVERTISEMENT

ಫುಟ್‌ಬಾಲ್: ಮಿಲಾನ್ ಕ್ಲಬ್‌ಗೆ ಕರ್ನಾಟಕದ ಆಟಗಾರರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ಬೆಂಗಳೂರು: ಕರ್ನಾಟಕದ ನಾಲ್ಕು ಮಂದಿ ಫುಟ್‌ಬಾಲ್ ಆಟಗಾರರು ಇಟಲಿ ಮೂಲದ ಇಂಟರ್ ಮಿಲಾನ್ ಫುಟ್‌ಬಾಲ್ ಕ್ಲಬ್‌ನಲ್ಲಿ ತರಬೇತಿ ಪಡೆಯಲು ಆಯ್ಕೆಯಾಗಿದ್ದಾರೆ.
ಟಿ. ಮ್ಯಾಥೂಸ್, ಜಾರ್ಜ್ ಸಾಮ್ಮೆ (ಇಬ್ಬರೂ ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಂಗಳೂರು), ಅಭಿಷೇಕ್ (ಸೇಂಟ್ ಪಾಲ್ಸ್ ಹೈಸ್ಕೂಲ್) ಹಾಗೂ ಸ್ಪಿಫನ್ (ಲಿಟಲ್ ಫ್ಲವರ್ ಹೈಸ್ಕೂಲ್) ಆಯ್ಕೆಯಾದ ವಿದ್ಯಾರ್ಥಿಗಳು.

ಉದ್ಯಾನನಗರಿಯಲ್ಲಿ ಶನಿವಾರ ಕೊನೆಗೊಂಡ ಟಾಟಾ ಟೀ ಜಾಗೋ ರೇ ಇಂಟರ್ ಮಿಲನ್ ಫುಟ್‌ಬಾಲ್ ಟೂರ್ನಿಯಲ್ಲಿ (15 ವರ್ಷದೊ ಗಿನವರು) ನೀಡಿದ ಪ್ರದರ್ಶನ ಆಧಾರದ ಮೇಲೆ ಈ ಆಯ್ಕೆ ನಡೆಯಿತು.
ಯುಇಎಫ್‌ಎ (ಯೂನಿಯನ್ ಆಫ್ ಯು ರೋಪಿಯನ್ ಫುಟ್‌ಬಾಲ್ ಅಸೋಸಿಯೇಷನ್) ಚಾಂಪಿಯನ್ಸ್ ಲೀಗ್‌ನಲ್ಲಿ ಮೂರು ಸಲ ಪ್ರಶಸ್ತಿ ಜಯಿಸಿರುವ ಈ ಕ್ಲಬ್‌ನಲ್ಲಿ ಕರ್ನಾಟಕದ ಆಟಗಾರರು ತರಬೇತಿ ಪಡೆಯಲಿದ್ದಾರೆ.

ವೀರಭದ್ರ ಪ್ರೌಢಶಾಲೆ ಚಾಂಪಿಯನ್: ನಗರದ ವೀರಭದ್ರ ಪ್ರೌಢಶಾಲೆ ಇಂಟರ್ ಮಿಲನ್ ಫುಟ್‌ಬಾಲ್ ಟೂರ್ನಿಯ (ಬೆಂಗಳೂರು ವಲಯದಿಂದ) ಐದನೇ ಅವೃತ್ತಿಯಲ್ಲಿ ಆಯಿತು. ಈ ಮೂಲಕ ಶಿಲ್ಲಾಂಗ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸೆಣಸುವ ಅವಕಾಶ ಪಡೆಯಿತು.

ಅಶೋಕನಗರ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ವೀರಭದ್ರ ಶಾಲೆ 3-2ಗೋಲುಗಳಿಂದ ಲಿಟಲ್ ಫ್ಲವರ್ ಈಸ್ಟ್ ಶಾಲೆಯನ್ನು ಮಣಿಸಿತು. ಈ ಪಂದ್ಯ 20 ನಿಮಿಷ ನಡೆಯಿತು. ರಿಚ್‌ಮಂಡ್ ಟೌನ್‌ನಲ್ಲಿರುವ  ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆಯ ಮೊಹಮ್ಮದ್ ನಯೀಮುದ್ದೀನ್ ಟೂರ್ನಿಯ `ಶ್ರೇಷ್ಠ~ ಆಟಗಾರ ಗೌರವ ಪಡೆದರು.

ಎರಡು ದಿನ ನಡೆದ ಈ ಟೂರ್ನಿಯಲ್ಲಿ ನಗರದ 66 ಶಾಲೆಗಳ 660 ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಕಷ್ಟಕ್ಕೆ ಒಲಿದ ಫಲ: `ಅಭ್ಯಾಸ ಮಾಡಲು ಕ್ರೀಡಾಂಗಣದ ಅನಾನುಕೂಲತೆ ಇದ್ದರೂ, ಗೆಳೆಯರೊಂದಿಗೆ ಹೊರಗಡೆ ಅಭ್ಯಾಸ ಮಾಡುತ್ತಿದ್ದೆ. ಆದ್ದರಿಂದ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು~ ಎಂದು ಸೇಂಟ್ ಪಾಲ್ಸ್ ಶಾಲೆಯ ಅಭಿಷೇಕ್ `ಪ್ರಜಾವಾಣಿ~ಯೊಂದಿಗೆ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT