ADVERTISEMENT

ಫುಟ್‌ಬಾಲ್: ರಾಹುಲ್ ಹ್ಯಾಟ್ರಿಕ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:35 IST
Last Updated 16 ಜೂನ್ 2013, 19:35 IST

ಬೆಂಗಳೂರು: ರಾಹುಲ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬೆಂಗಳೂರು ರೆಡ್ಸ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಭಾನುವಾರದ ಪಂದ್ಯದಲ್ಲಿ 3-1 ಗೋಲುಗಳಿಂದ ಮಹಮ್ಮಡನ್ ಸ್ಪೋರ್ಟಿಂಗ್ ತಂಡದ ಎದುರು ಗೆಲುವು ಸಾಧಿಸಿತು.

ಐದನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದ ರಾಹುಲ್ ಉಳಿದ ಗೋಲುಗಳನ್ನು 51 ಮತ್ತು 63ನೇ ನಿಮಿಷದಲ್ಲಿ ಕಲೆ ಹಾಕಿ ಬೆಂಗಳೂರು ತಂಡದ ಗೆಲುವಿನ ರೂವಾರಿ ಎನಿಸಿದರು.

ದಿನದ ಇತರ ಪಂದ್ಯಗಳಲ್ಲಿ ಬಾಣಸವಾಡಿಯ ಯುನೈಟೆಡ್ ಫುಟ್‌ಬಾಲ್ ಕ್ಲಬ್ 3-2 ಗೋಲುಗಳಿಂದ ಗೋವನ್ಸ್ ಮೇಲೂ, ಬೆಂಗಳೂರು ಯಂಗ್‌ಸ್ಟರ್ಸ್‌ ತಂಡ 3-2ರಲ್ಲಿ ಯಂಗ್ ಬ್ಲೂಸ್ ವಿರುದ್ಧವೂ ಜಯ ಸಾಧಿಸಿ ಪೂರ್ಣ ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.