ADVERTISEMENT

ಫೈನಲ್‌ಗೆ ತಿಪ್ಸಾರೆವಿಕ್

ಚೆನ್ನೈ ಓಪನ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2013, 19:59 IST
Last Updated 5 ಜನವರಿ 2013, 19:59 IST
ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ ಜಾಂಕೊ ತಿಪ್ಸಾರೆವಿಕ್  	-ಎಪಿ ಚಿತ್ರ
ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ ಜಾಂಕೊ ತಿಪ್ಸಾರೆವಿಕ್ -ಎಪಿ ಚಿತ್ರ   

ಚೆನ್ನೈ (ಪಿಟಿಐ): ಎರಡನೇ ಶ್ರೇಯಾಂಕದ ಆಟಗಾರ ಜಾಂಕೊ ತಿಪ್ಸಾರೆವಿಕ್ ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಫೈನಲ್ ತಲುಪಿದ್ದಾರೆ.ನುಂಗುಬಾಕ್ಕಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಅವರು ಸ್ಲೊವಾಕಿಯಾದ ಅಲ್‌ಜಾಜ್ ಬೆಡೆನ್ ಅವರನ್ನು 4-6, 6-2, 6-2ರಿಂದ ಸೋಲಿಸಿದರು.

ಇದೇ ಟೂರ್ನಿಯ ಅಗ್ರ ಶ್ರೇಯಾಂಕದ ಆಟಗಾರ ಮತ್ತು ವಿಶ್ವ 6ನೇ ಕ್ರಮಾಂಕದ ಥಾಮಸ್ ಬೆರ್ಡಿಚ್ ಅವರನ್ನು ಸೋಲಿಸಿರುವ 23ರ ಹರೆಯದ ಬೆಡೆನ್ ಈ ಪಂದ್ಯದಲ್ಲಿಯೂ ಜಾಂಕೊ ಅವರಿಗೆ ಗೆಲುವನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಮೊದಲ ಸೆಟ್‌ನಲ್ಲಿ ಗೆದ್ದಿದ್ದರು ಕೂಡಾ.

ಪಂದ್ಯದ ನಂತರ ಮಾತನಾಡಿದ ತಿಪ್ಸಾರೆವಿಕ್ ಅವರು ಬೆಡೆನ್ ಆಟದ ಬಗ್ಗೆ ತಮ್ಮ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದರು. “ಇನ್ನು ಕೆಲವೇ ಸಮಯದಲ್ಲಿ ಬೆಡೆನ್ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 50ರ ಒಳಗೆ ಬಂದರೆ ಅಚ್ಚರಿ ಇಲ್ಲ” ಎಂದೂ ಅವರು ನುಡಿದರು.ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸೋಮದೇವ್ ಮತ್ತು ಉಕ್ರೇನ್‌ನ ಸರ್ಜಿ ಸ್ಟಕೋವ್‌ಸ್ಕಿ ಜೋಡಿ ಸೋಲು ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.