ADVERTISEMENT

ಫ್ರಾನ್ಸ್-ಪೋಲೆಂಡ್ ಪಂದ್ಯಕ್ಕೆ ಜನಗಣಮನ!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ನವದೆಹಲಿ: ಶನಿವಾರ ಸಂಜೆ ಮಹಿಳೆಯರ ವಿಭಾಗದಲ್ಲಿ ಭಾರತ ತಂಡ ಆಡಲು ಇನ್ನೂ ಎರಡು ತಾಸು ಇರುವಾಗಲೇ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಜನಗಣ ಮನ ಮೊಳಗಿತ್ತು!

ಹೌದು. ಮಧ್ಯಾಹ್ನ ನಾಲ್ಕು ಗಂಟೆಗೆ ಪುರುಷರ ವಿಭಾಗದ ಫ್ರಾನ್ಸ್ ಮತ್ತು ಪೊಲೆಂಡ್ ನಡುವಿನ ಪಂದ್ಯದ ಸಂದರ್ಭದಲ್ಲಿ ಈ ಪ್ರಮಾದ ಜರುಗಿತು. ಪಂದ್ಯದ ಕೆಲವು ನಿಮಿಷಗಳ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಆದರೆ ಕಂಪ್ಯೂಟರ್ ಆಪರೇಟರ್ ಮಾಡಿದ ಪ್ರಮಾದದಿಂದ ಫ್ರಾನ್ಸ್ ರಾಷ್ಟ್ರಗೀತೆಯ ಬದಲಿಗೆ ಭಾರತದ ರಾಷ್ಟ್ರಗೀತೆ ಆರಂಭವಾಯಿತು. ಇದರಿಂದ ಮೈದಾನದಲ್ಲಿದ್ದ ಆಟಗಾರರು ಮತ್ತು ಗೌರವ ಸಲ್ಲಿಸಲು ಎದ್ದು ನಿಂತಿದ್ದ ಮಾಧ್ಯಮದವರು ಹಾಗೂ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬೆರಳೆಣಿಕೆಯಷ್ಟು ಜನರು ಗೊಂದಲಕ್ಕೊಳಗಾದರು. ರಾಷ್ಟ್ರಗೀತೆಯನ್ನು ಅರ್ಧದಲ್ಲಿಯೇ ನಿಲ್ಲಿಸಲಾಯಿತು. ನಂತರ ಫ್ರಾನ್ಸ್ ರಾಷ್ಟ್ರಗೀತೆಯನ್ನು ನುಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.