ಬೆಂಗಳೂರು: ಫೆಡರೇಷನ್ ಕಪ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಚರ್ಚಿಲ್ ಬ್ರದರ್ಸ್‌್ ತಂಡವನ್ನು ಸುಲಭವಾಗಿ ಮಣಿಸಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಐ ಲೀಗ್ ಫುಟ್‌ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಗಟ್ಟಿ ಮಾಡಿ ಕೊಂಡಿತು.
ತವರು ನೆಲದ ಅಭಿಮಾನಿಗಳ ಬೆಂಬಲದಿಂದ ವಿಶ್ವಾಸದಿಂದಲೇ ಕಣಕ್ಕಿಳಿದ ಸುನಿಲ್ ಚೆಟ್ರಿ ಸಾರಥ್ಯದ ಬಿಎಫ್‌ಸಿ ತಂಡ ಪಂದ್ಯದ ಮೊದಲಾರ್ ಧದಲ್ಲಿ ಗೋಲು ಗಳಿಸುವಲ್ಲಿ ಯಶಸ್ಸು ಕಾಣಲಿಲ್ಲ. ಆದರೆ, ದ್ವಿತೀಯಾರ್ಧದಲ್ಲಿ ಮೂರು ಗೋಲುಗಳನ್ನು ಕಲೆ ಹಾಕಿತಲ್ಲದೇ, ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿತು. ಇದರಿಂದ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ 3–0 ಗೋಲುಗಳಿಂದ ಗೆಲುವು ಲಭಿಸಿತು.
ದ್ವಿತೀಯಾರ್ಧದ ಆಟ ಆರಂಭ ವಾದ ಕೆಲ ಹೊತ್ತಿನಲ್ಲಿ ಎರಡು ಗೋಲು ಗಳಿಸಿದ ಬಿಎಫ್‌ಸಿ ಚರ್ಚಿಲ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ನಾಯಕ ಚೆಟ್ರಿ 56ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ರಾಬಿನ್ ಸಿಂಗ್ 61ನೇ ನಿಮಿಷದಲ್ಲಿ ಗೋಲು ಕಲೆ ಹಾಕಿದರು. 90ನೇ ನಿಮಿಷದಲ್ಲಿ ತಮ್ಮ ಎರಡನೇ ಗೋಲು ಗಳಿಸಿದ ಚೆಟ್ರಿ ಗೆಲುವಿನ ರೂವಾರಿ ಎನಿಸಿದರು.
ಬಾಂಗ್ಲಾದೇಶ ವಿರುದ್ಧ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್ ಬಾಲ್ ಪಂದ್ಯದಲ್ಲಿ ಸುನಿಲ್ ಚೆಟ್ರಿ ಚುರುಕಿನ ಪ್ರದರ್ಶನ ತೋರಿದ್ದರು. ಇವರ ಆಟದ ನೆರವಿನಿಂದ ಭಾರತ ಆ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಅವರ ಸೊಗಸಾದ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿಯಿತು.
ಆ್ಯಷ್ಲೆ ವೆಸ್ಟ್‌ವುಡ್‌್ ಗರಡಿಯಲ್ಲಿ ತರಬೇತುಗೊಂಡಿರುವ ಬಿಎಫ್‌ಸಿ ತಂಡ ತವರು ನೆಲದ ಅಭಿಮಾನಿಗಳ ನಿರೀಕ್ಷೆ ಯನ್ನು ಹುಸಿ ಮಾಡಲಿಲ್ಲ. ಇಲ್ಲಿ ಗೆಲುವು ಸಾಧಿಸುವ ಮೂಲಕ ಶಿಲ್ಲಾಂ ಗ್‌ನಲ್ಲಿ ರಂಗ್‌ದಜೇದ್ ಎದುರು ಅನು ಭವಿಸಿದ್ದ ನಿರಾಸೆಯನ್ನು ಮರೆಯಿತು.
ಅಗ್ರಸ್ಥಾನ ಗಟ್ಟಿ: ಚೊಚ್ಚಲ ಐ ಲೀಗ್ ಟೂರ್ನಿ ಆಡುತ್ತಿರುವ ಬಿಎಫ್‌ಸಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
18 ಪಂದ್ಯಗಳನ್ನು ಆಡಿರುವ ಚೆಟ್ರಿ ಬಳಗ 10 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಈ ತಂಡದ ಬಳಿ ಒಟ್ಟು 34 ಪಾಯಿಂಟ್ಸ್‌ಗಳಿವೆ. 29 ಪಾಯಿಂಟ್ಸ್ ಹೊಂದಿರುವ ಪುಣೆ ಕ್ಲಬ್ ಎರಡನೇ ಸ್ಥಾನದಲ್ಲಿದೆ. ಆಡಿದ 17 ಪಂದ್ಯ ಗಳಲ್ಲಿ ಎಂಟರಲ್ಲಿ ನಿರಾಸೆ ಕಂಡಿರುವ ಚರ್ಚಿಲ್ ಬ್ರದರ್ಸ್ 12ನೇ ಸ್ಥಾನ ಹೊಂದಿದೆ.
ಗೋಲು ಬಂದ ಸಮಯ
*ಸುನಿಲ್ ಚೆಟ್ರಿ
(56 ಹಾಗೂ 90ನೇ ನಿಮಿಷ)
*ರಾಬಿನ್ ಸಿಂಗ್
(61ನೇ ನಿಮಿಷ)
ಬಿಎಫ್‌ಸಿ ಸಾಧನೆ
ಆಡಿದ ಪಂದ್ಯ 18
ಗೆಲುವು 10
ಸೋಲು 04
ಡ್ರಾ 04
ಪಾಯಿಂಟ್ಸ್ 34
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.