ADVERTISEMENT

ಬೆಲ್ಜಿಯಂ ತಂಡಕ್ಕೆ ಮಣಿದ ಪನಾಮ

ಏಜೆನ್ಸೀಸ್
Published 18 ಜೂನ್ 2018, 19:30 IST
Last Updated 18 ಜೂನ್ 2018, 19:30 IST
ಬೆಲ್ಜಿಯಂ ಮತ್ತು ಪನಾಮ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು ರಾಯಿಟರ್ಸ್‌ ಚಿತ್ರ
ಬೆಲ್ಜಿಯಂ ಮತ್ತು ಪನಾಮ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು ರಾಯಿಟರ್ಸ್‌ ಚಿತ್ರ   

ಸೋಚಿ: ರೊಮೆಲು ಲುಕಾಕು ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಲ್ಜಿಯಂ ತಂಡ 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಫಿಶ್ತ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಜಿ’ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ 3–0 ಗೋಲುಗಳಿಂದ ಪನಾಮ ತಂಡವನ್ನು ಸೋಲಿಸಿತು.

3–4–2–1ರ ಯೋಜನೆಯೊಂದಿಗೆ ಕಣಕ್ಕಿಳಿದಿದ್ದ ಬೆಲ್ಜಿಯಂ ತಂಡ ಆರಂಭದಿಂದಲೇ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಲು ಮುಂದಾಯಿತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ  55ನೇ ಸ್ಥಾನದಲ್ಲಿರುವ ಪನಾಮ ಕೂಡ ಮಿಂಚಿತು. ಹೀಗಾಗಿ ಮೊದಲ 40 ನಿಮಿಷಗಳ ಅವಧಿಯಲ್ಲಿ ಯಾವ ತಂಡಕ್ಕೂ ಗೋಲು ದಾಖಲಿಸಲು ಆಗಲಿಲ್ಲ. ನಂತರ ಬೆಲ್ಜಿಯಂ ವೇಗದ ಆಟಕ್ಕೆ ಮುಂದಾಯಿತು. ಈ ತಂಡದ ಪ್ರಯತ್ನಕ್ಕೆ 47ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಡ್ರಿಯಾಸ್‌ ಮೆರ್ಟೆನ್ಸ್‌ ಅಮೋಘ ರೀತಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಹಜಾರ್ಡ್‌ ಪಡೆಯ ಸಂಭ್ರಮಕ್ಕೆ ಕಾರಣರಾದರು.

ADVERTISEMENT

ದ್ವಿತೀಯಾರ್ಧದಲ್ಲೂ ಬೆಲ್ಜಿಯಂ ತಂಡ ಪಾರಮ್ಯ ಮೆರೆಯಿತು. ರೊಮೆಲು ಲುಕಾಕು 69 ಮತ್ತು 75ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ಪನಾಮ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.