ADVERTISEMENT

ಬೆಳ್ಳಿ ಪರದೆ ಮೇಲೆ ಉಷಾ ಬದುಕು?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:34 IST
Last Updated 6 ಸೆಪ್ಟೆಂಬರ್ 2013, 19:34 IST

ರಾಂಚಿ (ಪಿಟಿಐ): ‘ಫ್ಲೈಯಿಂಗ್‌ ಸಿಖ್‌’ ಖ್ಯಾತಿಯ ಮಿಲ್ಖಾ ಸಿಂಗ್‌ ಜೀವನ ಕಥೆ ಸಿನಿಮಾ ಆಗಿ ತೆರೆ ಕಂಡ ನಂತರ ಈಗ ಇನ್ನೊಬ್ಬ ಖ್ಯಾತ ಅಥ್ಲೀಟ್‌ ಪಿ.ಟಿ. ಉಷಾ ಸರದಿ. ಹೌದು, ಅವರ ಜೀವನ ಮತ್ತು ಸಾಧನೆ ಬಗ್ಗೆ ಚಿತ್ರ ನಿರ್ಮಿಸುವ ಕುರಿತು ಚಿಂತನೆ ನಡೆದಿದೆ.

‘ನನ್ನ ಜೀವನ ಕುರಿತು ಚಿತ್ರ ನಿರ್ಮಿ­ಸಲು ಕೆಲವರು ಮುಂದಾ­ಗಿದ್ದಾರೆ. ಈ ಕುರಿತು ಕೆಲವರು ನನ್ನ ಪತಿಯನ್ನು ಸಂಪರ್ಕಿಸಿದ್ದಾರೆ. ಆದರೆ, ಇದರ ಬಗ್ಗೆ ನಾವಿನ್ನು ನಿರ್ಧಾರ ಕೈಗೊಂಡಿಲ್ಲ’ ಎಂದು ಉಷಾ ಹೇಳಿದ್ದಾರೆ.

‘ಬಾಗ್‌ ಮಿಲ್ಖಾ ಬಾಗ್’ ಚಿತ್ರವನ್ನು ನೋಡಿದ್ದೇನೆ. ಯುವಕರಿಗೆ ಹಾಗೂ ಸಾಧನೆ ಮಾಡಬೇಕೆಂದು ಪಣ ತೊಟ್ಟವರಿಗೆ ಈ ಚಿತ್ರ ಸ್ಫೂರ್ತಿಯಾಗಿದೆ ಎಂದು ಅವರು ನುಡಿದರು.

ಕೇರಳದ ಈ ಅಥ್ಲೀಟ್‌ 1986ರಲ್ಲಿ ಸೋಲ್‌ನಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು.

ಡೆನ್ಮಾರ್ಕ್‌ ಟೂರ್ನಿಗೆ ಸೈನಾ
ಹೈದರಾಬಾದ್ (ಪಿಟಿಐ): ನಿರಂತರ ಟೂರ್ನಿಗಳನ್ನು ಆಡುತ್ತಿರುವ ಕಾರಣ ಸೈನಾ ನೆಹ್ವಾಲ್‌ ಜಪಾನ್‌ ಓಪನ್‌ ್ ಬ್ಯಾಡ್ಮಿಂಟನ್‌ ಓಪನ್‌ ಸೂಪರ್‌ ಸರಣಿಯಲ್ಲಿ ಆಡುವುದಿಲ್ಲ. ಬದಲಾಗಿ ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ಸೂಪರ್‌ ಸರಣಿಯಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT