ನವದೆಹಲಿ (ಪಿಟಿಐ): `ನಾನು ಕ್ರಿಕೆಟ್ ಆಡಲು ಫಿಟ್ ಆಗಿದ್ದೇನೆ. ಕೊಚ್ಚಿ ತಂಡದೊಂದಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪಂದ ರದ್ದು ಮಾಡಿಕೊಂಡಿದೆ. ಆದರೂ ನನಗೆ ವಿಶ್ವಾಸವಿದೆ. ಬೇರೆ ಫ್ರಾಂಚೈಸ್ಸಿಗಳು ನನ್ನನ್ನು ಖರೀದಿ ಮಾಡುತ್ತಾರೆ~
-ಹೀಗೆ ಹೇಳಿದ್ದು ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್. ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಐಪಿಎಲ್ ನೀತಿ ಸಂಹಿತೆ ಮುರಿದ ಕಾರಣ ಬಿಸಿಸಿಐ ಈ ತಂಡದೊಂದಿಗಿನ ಒಪ್ಪಂದವನ್ನು ಸೋಮವಾರ ರದ್ದುಪಡಿಸಿತ್ತು. `ನಾನು ಟ್ವೆಂಟಿ-20 ಮಾದರಿಯ ಪಂದ್ಯಗಳಲ್ಲಿ ಆಡಲು ಹೆಚ್ಚು ಆಸಕ್ತಿ ಹೊಂದಿದ್ದೇನೆ. ಎರಡು ವರ್ಷಕ್ಕೂ ಹೆಚ್ಚು ಕಾಲ ಆಡುವ ಸಾಮರ್ಥ್ಯ ನನ್ನಲ್ಲಿದೆ~ ಎಂದು ಮುರಳಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.