ADVERTISEMENT

ಬ್ಯಾಡ್ಮಿಂಟನ್: ಬೆಂಗಳೂರು ತಂಡಗಳ ಮೇಲುಗೈ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ದಾವಣಗೆರೆ: ಬೆಂಗಳೂರು ಉತ್ತರ ಮತ್ತು ದಕ್ಷಿಣ ತಂಡಗಳು ದಾವಣಗೆರೆ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯ ಬೆಂಗಳೂರು ವಿಭಾಗ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪೂರ್ಣ ಮೇಲುಗೈ ಸಾಧಿಸಿ ಸೆಮಿಫೈನಲ್ ತಲುಪಿವೆ.

ಸೋಮವಾರ ನಡೆದ ಪಂದ್ಯಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಬೆಂಗಳೂರು ಉತ್ತರ ತಂಡ 17ರ ಒಳಗಿನ ಬಾಲಕರ ವಿಭಾಗದಲ್ಲಿಫೈನಲ್ ಪ್ರವೇಶಿಸಿದೆ.

ಫಲಿತಾಂಶ :

17ರ ಒಳಗಿನ ವಯೋಮಾನದ ಬಾಲಕರ ವಿಭಾಗ: ಬೆಂಗಳೂರು ಉತ್ತರ ತಂಡ ಚಿಕ್ಕಬಳ್ಳಾಪುರದ ವಿರುದ್ಧ ( 2-1), ರಾಮನಗರವು ದಾವಣಗೆರೆ ವಿರುದ್ಧ (2-0), ಕೋಲಾರ ತಂಡ ಶಿವಮೊಗ್ಗ ವಿರುದ್ಧ (2-0), ಬೆಂಗಳೂರು ದಕ್ಷಿಣ ತಂಡವು ತುಮಕೂರು ವಿರುದ್ಧ (2-0) ಜಯಗಳಿಸಿದೆ.

ಕೊನೆಯಲ್ಲಿ ನಡೆದ ಒಂದು ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ಉತ್ತರ ತಂಡವು ರಾಮನಗರ ವಿರುದ್ಧ ( 2-1) ಜಯಗಳಿಸಿ ಫೈನಲ್ ಪ್ರವೇಶಿಸಿದೆ.

ಬಾಲಕಿಯರ ವಿಭಾಗ: ಶಿವಮೊಗ್ಗ ತಂಡವು ಕಳೆದ ವರ್ಷದ ಚಾಂಪಿಯನ್ ತುಮಕೂರು ವಿರುದ್ಧ (2-0) ಜಯಗಳಿಸಿದೆ. ಮಧುಗಿರಿ ತಂಡವು ಗೈರುಹಾಜರಾಗಿದ್ದರಿಂದ ದಾವಣಗೆರೆ ತಂಡ ಮುಂದಿನ ಸುತ್ತಿಗೆ ಮುನ್ನಡೆಯಿತು.

ಬೆಂಗಳೂರು ದಕ್ಷಿಣ ತಂಡವು ರಾಮನಗರ ವಿರುದ್ಧ (2-0), ಬೆಂಗಳೂರು ಉತ್ತರ ತಂಡವು ಚಿತ್ರದುರ್ಗದ ವಿರುದ್ಧ (2-0) ಜಯಗಳಿಸಿದೆ.

14ರ ಒಳಗಿನ ಬಾಲಕರು: ಬೆಂಗಳೂರು ದಕ್ಷಿಣ ತಂಡವು ಚಿತ್ರದುರ್ಗದ ವಿರುದ್ಧ (2-0), ಕೋಲಾರ ತಂಡವು ದಾವಣಗೆರೆ ವಿರುದ್ಧ ( 2-1), ಶಿವಮೊಗ್ಗ ತಂಡವು ರಾಮನಗರ ವಿರುದ್ಧ (2-0), ಬೆಂಗಳೂರು ಉತ್ತರ ತಂಡವು ಚಿಕ್ಕಬಳ್ಳಾಪುರ ವಿರುದ್ಧ (2-0) ಜಯ ಗಳಿಸಿದೆ.

ಬಾಲಕಿಯರು: ಬೆಂಗಳೂರು ಉತ್ತರ ತಂಡವು ಚಿಕ್ಕಬಳ್ಳಾಪುರ ವಿರುದ್ಧ ( 2-0), ದಾವಣಗೆರೆ ತಂಡವು ಚಿತ್ರದುರ್ಗ ವಿರುದ್ಧ (2-0), ತುಮಕೂರು ತಂಡವು ಬೆಂಗಳೂರು ಗ್ರಾಮಾಂತರ ವಿರುದ್ಧ (2-0), ಬೆಂಗಳೂರು ದಕ್ಷಿಣ ತಂಡವು ಕೋಲಾರ ವಿರುದ್ಧ (2-0) ಜಯ ಗಳಿಸಿದೆ.

ಇಂದಿನ ಪಂದ್ಯ
ಅ. 9ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ 17ರ ಒಳಗಿನ ಬಾಲಕರ ವಿಭಾಗದಲ್ಲಿ ಕೋಲಾರ- ಬೆಂಗಳೂರು ದಕ್ಷಿಣ, ಬಾಲಕಿಯರ ವಿಭಾಗದಲ್ಲಿ ಶಿವಮೊಗ್ಗ -ದಾವಣಗೆರೆ, ಬೆಂಗಳೂರು ದಕ್ಷಿಣ - ಬೆಂಗಳೂರು ಉತ್ತರ ತಂಡಗಳು ಸೆಣಸಲಿವೆ.

14ರ ಒಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ - ಕೋಲಾರ, ಶಿವಮೊಗ್ಗ- ಬೆಂಗಳೂರು ಉತ್ತರ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ - ದಾವಣಗೆರೆ, ತುಮಕೂರು - ಬೆಂಗಳೂರು      ದಕ್ಷಿಣ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.