ಬೆಂಗಳೂರು: ಮಂಗಳೂರು ಕ್ಲಬ್ ತಂಡ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಬಿ.ಎಸ್. ನಾರಾಯಣ ಸ್ಮಾರಕ ರಾಜ್ಯ ಸಬ್ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ 41-27 ಪಾಯಿಂಟ್‌ಗಳಿಂದ ಹಲಸೂರು ಸ್ಪೋರ್ಟ್ಸ್ ಕ್ಲಬ್ ಎದುರು ಗೆಲುವು ಸಾಧಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡ ವಿರಾಮದ ವೇಳೆಗೆ 18-8ರಲ್ಲಿ ಮುನ್ನಡೆ ಸಾಧಿಸಿತ್ತು. ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಜೆಎಸ್‌ಸಿ ತಂಡ 33-32ರಲ್ಲಿ (ವಿರಾಮದ ಸ್ಕೋರು 17-16) ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್ ಕ್ಲಬ್ ಮೇಲೂ, ಚಂದ್ರಗಿರಿಯ ಎಸ್.ಪಿ. ಶಾಲೆ 28-9ರಲ್ಲಿ ಬೀಗಲ್ಸ್ ವಿರುದ್ಧವೂ, ಮಂಡ್ಯದ ವಿವೇಕಾನಂದ ತಂಡ 32-8ರಲ್ಲಿ ಪಿ.ಪಿ.ಸಿ. ಕ್ಲಬ್ ಮೇಲೂ, ಯಂಗ್ ಓರಿಯನ್ಸ್ 28-13ರಲ್ಲಿ ಬಿ.ಸಿ. ಬ್ಯಾಸ್ಕೆಟ್‌ಬಾಲ್ ಕ್ಲಬ್ ವಿರುದ್ಧವೂ ಗೆಲುವು ಸಾಧಿಸಿತು.
ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ಮಂಗಳೂರಿನ ಎನ್. ಶೆಟ್ಟಿ ತಂಡ 24-22ರಲ್ಲಿ ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್ ಕ್ಲಬ್ ಮೇಲೂ, ರಾಜಮಹಲ್ ಕ್ಲಬ್ 22-11ರಲ್ಲಿ ಧಾರವಾಡದ ರೋವರ್ಸ್ ವಿರುದ್ಧವೂ, ಐ.ಬಿ.ಬಿ.ಸಿ. 14-12ರಲ್ಲಿ ಜಂಪ್‌ಬಾಲ್ ಕ್ಲಬ್ ಮೇಲೂ ಜಯ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.