ADVERTISEMENT

ಭಾರತ–ಕೊರಿಯಾ ಪಂದ್ಯ ಡ್ರಾ

ಆತಿಥೇಯರ ವಿರುದ್ಧ 3–1ರ ಅಂತರದಿಂದ ಸರಣಿ ಗೆದ್ದ ಮಹಿಳಾ ತಂಡ

ಪಿಟಿಐ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

ಸೋಲ್‌: ಆತಿಥೇಯರ ವಿರುದ್ಧ 1–1ರ ಡ್ರಾ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡದವರು ದಕ್ಷಿಣ ಕೊರಿಯಾ ಎದುರಿನ ಹಾಕಿ ಸರಣಿಗೆ ತೆರೆ ಎಳೆದರು. ಭಾರತದ ಮಹಿಳೆಯರು 3–1ರಿಂದ ಸರಣಿ ತಮ್ಮದಾಗಿಸಿಕೊಂಡರು.

ಭಾನುವಾರದ ಪಂದ್ಯದ 48ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು. 50ನೇ ನಿಮಿಷದಲ್ಲಿ ಬೋಮಿ ಕಿಮ್ ಗಳಿಸಿದ ಗೋಲಿನ ಮೂಲಕ ದಕ್ಷಿಣ ಕೊರಿಯಾ ಸಮಬಲ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT