ಲುಧಿಯಾನ (ಪಿಟಿಐ): ಭಾರತ ಪುರುಷರ ತಂಡ ಶನಿವಾರ ಇಲ್ಲಿ ಕೊನೆಗೊಂಡ ನಾಲ್ಕನೇ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ (ಸರ್ಕಲ್) ಚಾಂಪಿಯನ್ ಆಗಿದೆ.
ಶನಿವಾರ ಗುರುನಾನಕ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತ 48–39 ಪಾಯಿಂಟ್ಗಳಿಂದ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ತಾನ ವನ್ನು ಮಣಿಸುವ ಮೂಲಕ ಈ ಸಾಧನೆ ಮಾಡಿದೆ. ಜೊತೆಗೆ ರೂ 2 ಕೋಟಿ ಬಹು ಮಾನ ಮೊತ್ತವನ್ನು ಪಡೆಯಿತು.
ಇದರೊಂದಿಗೆ ತಂಡ ಸತತವಾಗಿ ನಾಲ್ಕನೇ ಬಾರಿಗೆ ಪ್ರಶಸ್ತಿ ಜಯಿಸಿ ದಂತಾಗಿದೆ. ಮಹಿಳಾ ವಿಭಾಗ ದಲ್ಲೂ ಭಾರತ ಚಾಂಪಿಯನ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.