ADVERTISEMENT

ಭಾರತದ ಸ್ಪರ್ಧೆಗಳ ನೇರ ಪ್ರಸಾರ ಇಎಸ್‌ಪಿಎನ್ನಲ್ಲಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸುವ ಎಲ್ಲ ಕ್ರೀಡೆಗಳನ್ನು ಇಎಸ್‌ಪಿಎನ್ ನೇರ ಪ್ರಸಾರ ಮಾಡಲಿದೆ.

ಪ್ರತಿಯೊಂದು ಕ್ರೀಡೆಯನ್ನು ನಡೆಯುತ್ತಿರುವಂತೆಯೇ ತಕ್ಷಣ ನೋಡಲು ಭಾರತದ ಕ್ರೀಡಾಪ್ರಿಯರಿಗೆ ಸಾಧ್ಯವಾಗುವಂತೆ ಮಾಡುವುದು ಚಾನಲ್ ಉದ್ದೇಶ. ಏಕ ಕಾಲದಲ್ಲಿ ಎರಡು ಮೂರು ಸ್ಪರ್ಧೆಗಳು ನಡೆದಲ್ಲಿ ಸ್ಟಾರ್ ಸ್ಪೋರ್ಟ್ಸ್ ಹಾಗೂ ಇಎಸ್‌ಪಿಎನ್ ಎಚ್‌ಡಿ ಚಾನಲ್‌ನಲ್ಲಿಯೂ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡುವ ಭರವಸೆಯನ್ನು ಇಎಸ್‌ಪಿಎನ್-ಸ್ಟಾರ್ ಸ್ಪೋರ್ಟ್ಸ್ (ಇಎಸ್‌ಎಸ್) ನೀಡಿದೆ.

ಭಾರತದವರು ಪದಕ ಗೆಲ್ಲುವಂಥ ಸಾಧ್ಯತೆ ಇರುವ ಕ್ರೀಡೆಗಳಾದ ಶೂಟಿಂಗ್, ಬಾಕ್ಸಿಂಗ್, ಆರ್ಚರಿ, ಟೆನಿಸ್ ಹಾಗೂ ಕುಸ್ತಿಗೆ ಇಎಸ್‌ಪಿಎನ್‌ನಲ್ಲಿ ಆದ್ಯತೆ ಸಿಗಲಿದೆ. ಭಾರತ ತಂಡ ಆಡುವ ಎಲ್ಲ ಹಾಕಿ ಪಂದ್ಯಗಳನ್ನು ಕೂಡ ವೀಕ್ಷಕರು ನೋಡಬಹುದಾಗಿದೆ.

ADVERTISEMENT

ಭಾರತೀಯ ಕಾಲಮಾನದ ಪ್ರಕಾರ ಪ್ರತಿದಿನ ಮಧ್ಯಾಹ್ನ 12.30ಕ್ಕೆ ಇಎಸ್‌ಪಿಎನ್‌ನಲ್ಲಿ ಆರಂಭವಾಗುವ ನೇರ ಪ್ರಸಾರವು ಬೆಳಗಿನ ಜಾವ 4.30ಕ್ಕೆ ಕೊನೆಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ ಮಧ್ಯಾಹ್ನ 1.30ಕ್ಕೆ ಪ್ರಸಾರ ಶುರುವಾಗುತ್ತದೆ.

ವಿವಿಧ ಕ್ರೀಡೆಗಳ ಕುರಿತು ಪರಿಣತರಿಂದ ಚರ್ಚೆಯೂ ನಡೆಯಲಿದೆ. ಮಾಜಿ ಟೆನಿಸ್ ಆಟಗಾರ ವಿಜಯ್ ಅಮೃತ್‌ರಾಜ್, ಮಾಜಿ ಕ್ರಿಕೆಟಿಗ ಹಾಗೂ ಕ್ರೀಡಾ ವಿಶ್ಲೇಷಕ ಆ್ಯಲನ್ ವಿಲ್ಕಿನ್ಸ್ ಅವರೊಂದಿಗೆ ಕಾರ್ಯಕ್ರಮ ನಿರೂಪಕರಾದ ಸ್ಟೀವ್ ಡೇವ್ಸನ್ ಮತ್ತು ಜೇಸನ್ ಡೆ ಲಾ ಪೆನಾ ಅವರು ಚರ್ಚೆಯಲ್ಲಿ ಪಾಲ್ಗೊಳ್ಳುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.