ADVERTISEMENT

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಯ್ಕೆ ಪ್ರಕ್ರಿಯೆ: ನಾಳೆ ಸಿಎಸಿ ಸಭೆ

ಏಜೆನ್ಸೀಸ್
Published 9 ಜುಲೈ 2017, 14:22 IST
Last Updated 9 ಜುಲೈ 2017, 14:22 IST
ರವಿ ಶಾಸ್ತ್ರಿ (ಸಂಗ್ರಹ ಚಿತ್ರ)
ರವಿ ಶಾಸ್ತ್ರಿ (ಸಂಗ್ರಹ ಚಿತ್ರ)   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಒಟ್ಟು ಹತ್ತು ಮಂದಿ ಮಾಜಿ ಆಟಗಾರರು ಅರ್ಜಿ ಸಲ್ಲಿಸಿದ್ದು, ಈ ಪೈಕಿ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಹೆಸರು ಮುಂಚೂಣಿಯಲ್ಲಿದೆ. ಕೋಚ್ ಆಯ್ಕೆ ವಿಚಾರವಾಗಿ ಚರ್ಚೆ ನಡೆಸಲು ಮೂವರು ಸದಸ್ಯರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸೋಮವಾರ ಸಭೆ ಸೇರಲಿದೆ.

ದಾಖಲೆಗಳ ಪ್ರಕಾರ, ಒಟ್ಟು ಹತ್ತು ಮಂದಿ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗರಾದ ವೀರೇಂದರ್ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ದೊಡ್ಡಗಣೇಶ್, ಲಾಲ್‌ಚಂದ್ ರಜಪೂತ್, ಲೇನ್ಸ್ ಕ್ಲುಸೆನರ್, ರಾಕೇಶ್ ಶರ್ಮಾ, ಫಿಲ್ ಸಿಮನ್ಸ್ ಮತ್ತು ಉಪೇಂದ್ರನಾಥ್ ಅರ್ಜಿ ಸಲ್ಲಿಸಿದ್ದಾರೆ.

ಆರು ಮಂದಿಗೆ ಸಂದರ್ಶನ: ಹತ್ತು ಮಂದಿ ಅರ್ಜಿದಾರರ ಪೈಕಿ ಆರು ಮಂದಿಯನ್ನು ಸಿಎಸಿ ಮಾತ್ರ ಸಂದರ್ಶನ ನಡೆಸಲಿದೆ. ಮೂಲಗಳ ಪ್ರಕಾರ, ರವಿಶಾಸ್ತ್ರಿ, ಸೆಹ್ವಾಗ್, ಮೂಡಿ, ಸಿಮನ್ಸ್, ರಿಚರ್ಡ್ ಮತ್ತು ರಜಪೂತ್ ಅವರು ಸಂದರ್ಶನಕ್ಕೊಳಪಡುವ ಸಾಧ್ಯತೆ ಇದೆ.

ADVERTISEMENT

ಕನ್ನಡಿಗ ಅನಿಲ್ ಕುಂಬ್ಳೆ ಅವರು ನಾಯಕ ವಿರಾಟ್ ಕೊಹ್ಲಿ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಇತ್ತೀಚೆಗೆ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.