ADVERTISEMENT

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಹುದ್ದೆಗೆ ಸಂದರ್ಶನ

ಏಜೆನ್ಸೀಸ್
Published 10 ಜುಲೈ 2017, 13:50 IST
Last Updated 10 ಜುಲೈ 2017, 13:50 IST
ಸೌರವ್ ಗಂಗೂಲಿ, ಸಿಎಸಿ ಸದಸ್ಯ (ಸಂಗ್ರಹ ಚಿತ್ರ)
ಸೌರವ್ ಗಂಗೂಲಿ, ಸಿಎಸಿ ಸದಸ್ಯ (ಸಂಗ್ರಹ ಚಿತ್ರ)   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಸಂದರ್ಶನ ಸೋಮವಾರ ನಡೆಯಿತು. ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಹಾಗೂ ವಿ.ವಿ.ಎಸ್‌. ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಸಂದರ್ಶನ ನಡೆಸಿದ್ದು, ನಿರ್ಧಾರವನ್ನು ತಡೆಹಿಡಿದಿದೆ.

‘ಕೋಚ್‌ ಆಯ್ಕೆ ಪ್ರಕಟಿಸಲು ಆತುರವಿಲ್ಲ. ನಿರ್ಧಾರ ಕೈಗೊಳ್ಳಲು ಇನ್ನೂ ಕೆಲ ಸಮಯ ಬೇಕಾಗಿದೆ. ಶ್ರೀಲಂಕಾ ಪ್ರವಾಸಕ್ಕೆ ಇನ್ನೂ ಸಮಯವಿದೆ’ ಎಂದು ಸಂದರ್ಶನದ ಬಳಿಕ ಸೌರವ್ ಗಂಗೂಲಿ ತಿಳಿಸಿದರು.

ಅರ್ಜಿ ಸಲ್ಲಿಸಿದ್ದ ಹತ್ತು ಮಂದಿ ಪೈಕಿ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಲಾಲ್‌ಚಂದ್ ರಜಪೂತ್, ರಿಚರ್ಡ್ ಪೇಬಸ್ ಸಂದರ್ಶನಕ್ಕೆ ಹಾಜರಾದರು. ಫಿಲ್ ಸಿಮನ್ಸ್ ಅವರು ಸಂದರ್ಶನಕ್ಕೆ ಹಾಜರಾಗಲಿಲ್ಲ. ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.