ADVERTISEMENT

‘ಭಾರತ ತಂಡದ ಬದಲಾವಣೆಗೆ ಫ್ಲೆಚರ್‌ ಕಾರಣ’: ಗ್ಯಾರಿ ಕರ್ಸ್ಟನ್‌

ಪಿಟಿಐ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಗ್ಯಾರಿ ಕರ್ಸ್ಟನ್‌
ಗ್ಯಾರಿ ಕರ್ಸ್ಟನ್‌   

ನವದೆಹಲಿ: ‘ಭಾರತ ಕ್ರಿಕೆಟ್‌ ತಂಡದಲ್ಲಿ ಇಂದು ಕಾಣುತ್ತಿರುವ ಬದಲಾವಣೆಗೆ ಡಂಕನ್‌ ಫ್ಲೆಚರ್‌ ಅವರ ಕೊಡುಗೆ ಸಾಕಷ್ಟಿದೆ’ ಎಂದು ಹಿಂದೆ ಭಾರತ ತಂಡದ ಕೋಚ್‌ ಆಗಿದ್ದ ಗ್ಯಾರಿ ಕರ್ಸ್ಟನ್‌ ಅಭಿಪ್ರಾಯಪಟ್ಟಿದ್ದಾರೆ.

‘ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿದ್ದ ಡಂಕನ್‌, ಅಂದು ನಾಯಕರಾಗಿದ್ದ ಮಹೇಂದ್ರ ಸಿಂಗ್‌ ದೋನಿ ಅವರ ಸಹಕಾರದೊಂದಿಗೆ ತಂಡದಲ್ಲಿ ಅನೇಕ ಬದಲಾವಣೆ ತಂದರು. ಇದೇ ಅವಧಿಯಲ್ಲಿ ಯುವ ಆಟಗಾರರು ಅವಕಾಶ ಪಡೆಯುವಂತಾಯಿತು. ಇದರಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರೆಲ್ಲ ಉತ್ತಮ ಆಟಗಾರರಾಗಿ ರೂಪುಗೊಂಡರು’ ಎಂದು ಅವರು ಹೇಳಿದ್ದಾರೆ.

‘ತಂಡದ ಫಲಿತಾಂಶದ ಮೇಲೆ ಕೋಚ್‌ ಅವರ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಆದರೆ, ಆಟಗಾರರ ಮೇಲೆ ಕೋಚ್‌ ಯಾವ ರೀತಿಯ ಪರಿಣಾಮ ಬೀರುತ್ತಾನೆ ಎಂಬುದು ಮುಖ್ಯ. ಅದು ದೀರ್ಘ ಅವಧಿಯವರೆಗೆ ತಂಡವನ್ನು ಮುನ್ನಡೆಸುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.