ADVERTISEMENT

ಭಾರತ- ಪಾಕ್ ಕ್ರಿಕೆಟ್ ಪಂದ್ಯ: ಅರ್ಧ ಗಂಟೆಯಲ್ಲೇ ಟಿಕೆಟ್ ಖಾಲಿ...

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ದುಬೈ (ಪಿಟಿಐ): ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜೂನ್15ರಂದು ಭಾರತ-ಪಾಕಿಸ್ತಾನ ನಡುವೆ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುವ ಪಂದ್ಯದ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ.

ಆನ್‌ಲೈನ್‌ನಲ್ಲಿ ಮಾರಾಟ ಪ್ರಕಟಿಸಿ ಕೇವಲ ಅರ್ಧ ಗಂಟೆಯ ಒಳಗೇ ಎಲ್ಲಾ ಟಿಕೆಟ್‌ಗಳೂ ಖರೀದಿಯಾಗಿವೆ ಎಂದು ಟೂರ್ನಿಯ ನಿರ್ದೇಶಕ ಸ್ಟೀವ್ ಎಲ್‌ವರ್ದಿ ಹೇಳಿದರು. ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಟಿಕೆಟ್ ಮಾರಾಟಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಕಂಡು ನಮಗೆ ಅಚ್ಚರಿಯಾಗಿದೆ. ಉಳಿದ ಪಂದ್ಯಗಳ ಟಿಕೆಟ್‌ಗಳೂ ಮಾರಾಟವಾಗಿವೆ' ಎಂದರು.

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳು ಕಾರ್ಡಿಫ್, ಎಜ್‌ಬಾಸ್ಟನ್ ಮತ್ತು ದಿ ಓವಲ್‌ನಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.