ADVERTISEMENT

ಭಾರತ ಮಹಿಳೆಯರ ‘ಎ’ ತಂಡಕ್ಕೆ ಮತ್ತೊಂದು ಸವಾಲು

ಪಿಟಿಐ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಅನುಜಾ ಪಾಟೀಲ್ ನಾಯಕತ್ವದ ಭಾರತ ‘ಎ’ ಮಹಿಳೆಯರ ತಂಡ ಮುಂಬೈನಲ್ಲಿ ಅಭ್ಯಾಸ ನಡೆಸಿದ ಕ್ಷಣ –ಪಿಟಿಐ ಚಿತ್ರ
ಅನುಜಾ ಪಾಟೀಲ್ ನಾಯಕತ್ವದ ಭಾರತ ‘ಎ’ ಮಹಿಳೆಯರ ತಂಡ ಮುಂಬೈನಲ್ಲಿ ಅಭ್ಯಾಸ ನಡೆಸಿದ ಕ್ಷಣ –ಪಿಟಿಐ ಚಿತ್ರ   

ಮುಂಬೈ: ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ ಮಹಿಳೆಯರ ‘ಎ’ ತಂಡವು ಗುರುವಾರ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಎದುರಿನ ಎರಡನೇ ಅಭ್ಯಾಸ ಪಂದ್ಯದಲ್ಲಿ ಜಯಿಸುವ ಛಲದಲ್ಲಿದೆ.

ಮೊದಲ ಪಂದ್ಯದಲ್ಲಿ 321 ರನ್‌ಗಳಿಂದ ಸೋತಿದ್ದ ಭಾರತ ತಂಡ ಈ ಪಂದ್ಯದಲ್ಲಿ ಸಂಘಟಿತ ಆಟ ಆಡಬೇಕಿದೆ. ಅನುಭವಿ ಆಸ್ಟ್ರೇಲಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ.

ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳನ್ನು ದಂಡಿಸಿದ್ದ ಮೆಗ್ ಲ್ಯಾನಿಂಗ್ ಬಳಗ 50 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಬರೋಬ್ಬರಿ 413 ರನ್ ಕಲೆಹಾಕಿತ್ತು. ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಯುವ ಆಟಗಾರ್ತಿಯರಿಗೆ ಸವಾಲಾಗಿತ್ತು. ಆದರೆ ಅನುಜಾ ಪಾಟೀಲ ಬಳಗ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

ADVERTISEMENT

ನಾಯಕಿ ಅನುಜಾ ದಾಖಲಿಸಿದ್ದ 16ರನ್ ಈ ತಂಡದ ಹೆಚ್ಚು ಮೊತ್ತ ಎನಿಸಿತ್ತು. ಯುವ ಮಹಿಳೆಯರ ಬಳಗಕ್ಕೆ ಸಾಮರ್ಥ್ಯ ಸಾಬೀತು ಮಾಡಲು ಇದು ಕೊನೆಯ ಅಭ್ಯಾಸ ಪಂದ್ಯ ಎನಿಸಿದೆ.

ಮಾರ್ಚ್‌ 12ರಿಂದ ಭಾರತ ಮಹಿಳೆಯರ ತಂಡ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.