ADVERTISEMENT

ಭಾರತ ವಿಶ್ವಕಪ್‌ ಕಬಡ್ಡಿ ಚಾಂಪಿಯನ್‌

ಏಜೆನ್ಸೀಸ್
Published 22 ಅಕ್ಟೋಬರ್ 2016, 16:16 IST
Last Updated 22 ಅಕ್ಟೋಬರ್ 2016, 16:16 IST
ಭಾರತ ವಿಶ್ವಕಪ್‌ ಕಬಡ್ಡಿ ಚಾಂಪಿಯನ್‌
ಭಾರತ ವಿಶ್ವಕಪ್‌ ಕಬಡ್ಡಿ ಚಾಂಪಿಯನ್‌   

ಅಹಮದಾಬಾದ್‌: ಫೈನಲ್‌ ಪಂದ್ಯದಲ್ಲಿ ಸತತ ಮೂರನೇ ಬಾರಿಗೆ ಮುಖಾಮುಖಿಯಾಗಿದ್ದ ಭಾರತ–ಇರಾನ್‌ ನಡುವಿನ ಸೆಣಸಾಟದಲ್ಲಿ ಇರಾನ್‌ ತಂಡವನ್ನು ಬಗ್ಗುಬಡಿದ ಭಾರತದ ಆಟಗಾರರು ವಿಶ್ವಕಪ್‌ ಕಬಡ್ಡಿ ಚಾಂಪಿಯನ್‌ ಮುಡಿಗೇರಿಸಿಕೊಂಡರು. ಈ ಮೂಲಕ ಐತಿಹಾಸಿಕ ಸಾಧನೆ ತೋರಿದರು.

ಶನಿವಾರ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆದ ಇರಾನ್‌ ವಿರುದ್ಧದ ಫೈನಲ್‌ ಸೆಣಸಾಟದಲ್ಲಿ ಭಾರತ ತಂಡ 38–29ರಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ವಿಜಯೋತ್ಸವ ಆಚರಿಸಿತು.

ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ ವಿರುದ್ಧ 73–20ರಿಂದ ಏಕಪಕ್ಷೀಯ ಗೆಲುವು ಸಾಧಿಸಿದ್ದ ಭಾರತ ತಂಡ, ಫೈನಲ್‌ನಲ್ಲಿ ಇರಾನ್‌ ವಿರುದ್ಧ ಸೆಣಸಾಟದಲ್ಲಿ ಮೊದಲಾರ್ಧ ಮುಗಿದಾಗ ಹಿನ್ನಡೆ ಅನುಭವಿಸಿತ್ತು. ಬಳಿಕ ಚುರುಕು ಮತ್ತು ಉತ್ತಮ ಆಟ ಪ್ರದರ್ಶಿಸಿ ಮುನ್ನಡೆ ಸಾಧಿಸಿ ಗೆಲುವಿನ ಗುರಿ ತಲುಪಿತು.

ಇದರೊಂದಿಗೆ 2004, 2007 ಹಾಗೂ 2016ರಲ್ಲಿ ಇರಾನ್‌ ವಿರುದ್ಧ ನಡೆದ ಮೂರೂ ಫೈನಲ್‌ನಲ್ಲೂ ವಿಶ್ವಕಪ್‌ ಗೆದ್ದ ಹ್ಯಾಟ್ರಿಕ್‌ ಸಾಧನೆ ಭಾರತದ್ದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.