ADVERTISEMENT

ಭಾರತ ಹಾಕಿ ತಂಡ ಬಲಿಷ್ಠ: ಮನ್‌ಪ್ರೀತ್‌

ಪಿಟಿಐ
Published 26 ಫೆಬ್ರುವರಿ 2018, 18:35 IST
Last Updated 26 ಫೆಬ್ರುವರಿ 2018, 18:35 IST

ನವದೆಹಲಿ: ‘ಭಾರತ ಹಾಕಿ ತಂಡ ಪ್ರಪಂಚದ ಯಾವುದೇ ತಂಡವನ್ನು ಮಣಿಸುವಷ್ಟು ಬಲಿಷ್ಠ ವಾಗಿದೆ. ಹೀಗಾಗಿ ಮುಂಬರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಹಾಕಿಯಲ್ಲಿ ತಂಡ ಪದಕ ಗೆಲ್ಲುವುದು ಖಚಿತ’ ಎಂದು ಮಿಡ್‌ ಫೀಲ್ಡರ್‌ ಮನ್‌ಪ್ರೀತ್ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

‘ಗ್ಲಾಸ್ಗೊದಲ್ಲಿ ಪದಕ ಗೆದ್ದ ನಂತರ ತಂಡದ ವಿಶ್ವಾಸ ಹೆಚ್ಚಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬಲಿಷ್ಠ ತಂಡಗಳು ಕಣಕ್ಕೆ ಇಳಿಯುತ್ತವೆ. ಹೀಗಾಗಿ ಉತ್ತಮ ಸ್ಪರ್ಧೆ ಇರುತ್ತದೆ. ಆದರೂ ಭಾರತ ಪದಕ ಗೆಲ್ಲುವ ಸಾಧ್ಯತೆ ಇದೆ’ ಎಂದು ಅವರು ಸುದ್ದಿ ಸಂಸ್ಥೆಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT