ಪುಣೆ: ಪ್ಲೇ ಆಫ್ ಹಂತ ಪ್ರವೇಶಿಸಲು ಜಯ ಅನಿವಾರ್ಯ ಆಗಿದ್ದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಚೆನ್ನೈ ಸೂಪರ್ ಕಿಂಗ್ಸ್ಗೆ ಮಣಿಯಿತು.
ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಥಾನ ಅಭಾದಿತ ಆಯಿತು. ಆ ತಂಡ ಪ್ಲೇ ಆಫ್ಗೆ ಸಾಗಿತು.
ಭಾನುವಾರ ಇಲ್ಲಿ ನಡೆದ ಪಂದ್ಯ ದಲ್ಲಿ ಪಂಜಾಬ್ ತಂಡವು 19.4 ಓವರ್ಗಳಲ್ಲಿ 153 ರನ್ ಗಳಿಸಿತು. ಭಾರಿ ಅಂತರದಿಂದ ಗೆದ್ದರೆ ಆ ತಂಡಕ್ಕೆ ಪ್ಲೇ ಆಫ್ ಹಾದಿ ಸುಗಮ ಆಗುತ್ತಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್ಗಳಿಂದ ಗೆದ್ದು ಆ ತಂಡದ ಆಸೆಗೆ ತಣ್ಣೀರು ಎರಚಿತು.
ಸಂಕ್ಷಿಪ್ತ ಸ್ಕೋರ್
ಕಿಂಗ್ಸ್ ಇಲೆವನ್ ಪಂಜಾಬ್: 19.4 ಓವರ್ಗಳಲ್ಲಿ 153 (ಮನೋಜ್ ತಿವಾರಿ 35, ಡೇವಿಡ್ ಮಿಲ್ಲರ್ 24, ಕರುಣ್ ನಾಯರ್ 54; ಲುಂಗಿ ಗಿಡಿ 10ಕ್ಕೆ4, ಶಾರ್ದೂಲ್ ಠಾಕೂರ್ 33ಕ್ಕೆ2)
ಚೆನ್ನೈ ಸೂಪರ್ ಕಿಂಗ್ಸ್: 19.1 ಓವರ್ಗಳಲ್ಲಿ 5 ವಿಕೆಟ್ಗಳಿಗೆ 159 (ಸುರೇಶ್ ರೈನಾ 61, ದೀಪಕ್ ಚಾಹರ್ 39, ಮಹೇಂದ್ರ ಸಿಂಗ್ ದೋನಿ ಅಜೇಯ 16; ಅಂಕಿತ್ ರಜಪೂತ್ 18ಕ್ಕೆ2, ಅಶ್ವಿನ್ 36ಕ್ಕೆ2)
ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್ಗೆ ಐದು ವಿಕೆಟ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.