ADVERTISEMENT

ಮಹಮ್ಮಡನ್‌ಗೆ ಜಯ

ಐ ಲೀಗ್ ಫುಟ್‌ಬಾಲ್ ಎರಡನೇ ಡಿವಿಷನ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST
ಐ ಲೀಗ್ ಎರಡನೇ ಡಿವಿಷನ್‌ನ ಗುರುವಾರದ ಪಂದ್ಯದಲ್ಲಿ ಸದರ್ನ್ ಸಮಿತಿಯ ಫ್ರಾನ್ಸಿಸ್ ಒನೆಯೆಮಾ, ಮಹಮ್ಮಡನ್ ಸ್ಪೋರ್ಟಿಂಗ್‌ನ ಚಾರ್ಲೆಸ್ ಡಿ ಜೇಶಿಹ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದರು 	-ಪ್ರಜಾವಾಣಿ ಚಿತ್ರ
ಐ ಲೀಗ್ ಎರಡನೇ ಡಿವಿಷನ್‌ನ ಗುರುವಾರದ ಪಂದ್ಯದಲ್ಲಿ ಸದರ್ನ್ ಸಮಿತಿಯ ಫ್ರಾನ್ಸಿಸ್ ಒನೆಯೆಮಾ, ಮಹಮ್ಮಡನ್ ಸ್ಪೋರ್ಟಿಂಗ್‌ನ ಚಾರ್ಲೆಸ್ ಡಿ ಜೇಶಿಹ್ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪೈಪೋಟಿ ನಡೆಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ  ಡಿವಿಷನ್‌ನ ಗುರುವಾರದ ಪಂದ್ಯದಲ್ಲಿ 1-0 ಗೋಲುಗಳಿಂದ ಸದರ್ನ್ ಸಮಿತಿ ಎದುರು ಗೆಲುವು ಸಾಧಿಸಿತು.

ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತದ ಮಹಮ್ಮಡನ್ ತಂಡದ ಚಾರ್ಲೆಸ್ ಜೇಶಿಹ್ 35ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.

ಲ್ಯಾಂಗ್ ಸ್ನಿಂಗ್ ಹಾಗೂ ಭಾವನಿಪುರೆ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು 3-3 ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು. ಲ್ಯಾಂಗ್‌ಸ್ನಿಂಗ್ ತಂಡದ ಡೇನಿಯಲ್17ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ಸುಟಿಂಗ್ (20ನೇ  ನಿಮಿಷ) ಹಾಗೂ ಜೋಯೆಲ್ (53ನೇ ನಿ.) ತಲಾ ಒಂದು ಗಳಿಸಿದರು.

ಲ್ಯಾಂಗ್‌ಸ್ನಿಂಗ್ ತಂಡದ ಹೋರಾಟಕ್ಕೆ ಪ್ರಬಲ ಪ್ರತಿರೋಧ ಒಡ್ಡಿದ ಭಾವನಿಪುರೆ ಸಮಬಲ ಸಾಧಿಸುವಲ್ಲಿ ಯಶ ಕಂಡಿತು. ಈ ತಂಡದ ಹಡ್ಸನ್ 13 ಹಾಗೂ 69ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ದಿಪೆಂಡು (45+1) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.