ADVERTISEMENT

‘ಮುಂದಿನ ವಿಶ್ವಕಪ್‌ ಉ. ಅಮೆರಿಕದಲ್ಲಿ ನಡೆಯಲಿ’

ಏಜೆನ್ಸೀಸ್
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಫುಟ್‌ಬಾಲ್‌ ಆಟಗಾರ ಡೇವಿಡ್‌ ಬೆಕಮ್‌
ಫುಟ್‌ಬಾಲ್‌ ಆಟಗಾರ ಡೇವಿಡ್‌ ಬೆಕಮ್‌   

ಲಂಡನ್‌ : ‘2026ರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಆತಿಥ್ಯವನ್ನು ಉತ್ತರ ಅಮೆರಿಕ ವಹಿಸಿ ಕೊಳ್ಳಲಿ’ ಎಂದು ಇಂಗ್ಲೆಂಡ್‌ನ ಹಿರಿಯ ಫುಟ್‌ಬಾಲ್‌ ಆಟಗಾರ ಡೇವಿಡ್‌ ಬೆಕಮ್‌ ಹೇಳಿದ್ದಾರೆ.

‘ವಿಶ್ವಕಪ್‌ನಂತಹ ಟೂರ್ನಿಯು ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ದಂತಹ ಶ್ರೇಷ್ಠ ರಾಷ್ಟ್ರಗಳಲ್ಲಿ ನಡೆಯ ಬೇಕು. ಆಗ, ಅದು ವಿಶೇಷವಾಗಿರುತ್ತದೆ’ ಎಂದು ಮೇಜರ್‌ ಲೀಗ್‌ ಸಾಕರ್‌ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

‘ಈ ದೇಶಗಳಲ್ಲಿನ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿ ಫುಟ್‌ಬಾಲ್‌ ವೀಕ್ಷಿಸುತ್ತಾರೆ. ಅಷ್ಟು ತೀವ್ರವಾಗಿ ಫುಟ್‌ಬಾಲ್‌ ಅ‌ನ್ನು ಪರಿಗಣಿಸುವ ಜನರು ಇರುವ ಸ್ಥಳಗಳಲ್ಲಿ ವಿಶ್ವಕಪ್‌ ಆಯೋಜನೆಗೊಂಡರೆ ಸ್ಮರಣೀಯವಾಗಿ ರುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.