ADVERTISEMENT

ಮೇಕೇರಿರ, ಕನ್ನಂಡ ತಂಡಗಳ ಜಯಭೇರಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೇಕೇರಿರ ತಂಡವು ಮಚ್ಚೂರ ತಂಡವನ್ನು 2–0 ಗೋಲುಗಳಿಂದ ಮಣಿಸಿತು. ಮೇಕೇರಿರ ಪರ ನಿಹಾಲ್ ಮತ್ತು ಅರ್ಜುನ್ ತಲಾ ಒಂದು ಗೋಲು ಗಳಿಸಿದರು.

ಕನ್ನಂಡ ತಂಡವು ಪಟ್ಟಮಾಡ ವಿರುದ್ಧ 5–1ರಲ್ಲಿ ಗೆಲುವು ಪಡೆಯಿತು. ಕರ್ತಮಾಡ (ಬಿ.ಶೆಟ್ಟಿಗೇರಿ) ಮತ್ತು ಪಳಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರ್ತಮಾಡ ತಂಡವು ಜಯ ಗಳಿಸಿತು. ಕರ್ತಮಾಡ ತಂಡದ ಪರ ಲಲನ್ ಮತ್ತು ರೀತು ತಲಾ ಒಂದು ಗೋಲು ಗಳಿಸಿದರು.

ಚೋಡುಮಾಡ ತಂಡವು ಕಾಳ ಚಂಡ ವಿರುದ್ಧ, ಮುಕ್ಕಾಟಿರ ತಂಡವು ಪೊನ್ನಚೆಟ್ಟಿರ ವಿರುದ್ಧ, ಮಲ್ಲಂಡ ತಂಡವು ಕೊಲ್ಲಿರ ವಿರುದ್ಧ ಗೆದ್ದಿತು. ಮುಂಡಚಾಡಿರ ತಂಡವು ತಾತಿರ ತಂಡ ವನ್ನು 3–0 ಅಂತರದಲ್ಲಿ ಸೋಲಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.