*ಕಂಚಿನ ಪದಕ ಗೆದ್ದ ಬಗ್ಗೆ: ನನ್ನ ಗುರಿ ಇದ್ದದ್ದು ಚಿನ್ನದ ಪದಕ ಗೆದ್ದು ಬರಬೇಕು ಎಂದು. ಆದರೆ ಆ ಸಾಧನೆ ಮಾಡಲು ಆಗಲಿಲ್ಲ. ಈಗ ಅದೇ ವಿಷಯವನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಮುಂದಿನ ಬಾರಿ ಉತ್ತಮ ಪದಕ ಜಯಿಸಲು ಮತ್ತಷ್ಟು ಕಠಿಣ ಪ್ರಯತ್ನ ಹಾಕುತ್ತೇನೆ.
ಈ ಬಾರಿಯಒಲಿಂಪಿಕ್ಸ್ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಕೇವಲ ಮೂರು ವಿಭಾಗಗಳಿದ್ದವು. ರಯೋ ಡಿ ಜನೈರೊದಲ್ಲಿ ಆರು ವಿಭಾಗಗಳಲ್ಲಿ ಬಾಕ್ಸಿಂಗ್ ನಡೆಯಲಿದೆ.
*ಮಹಿಳೆಯರಿಗೆ ನಿಮ್ಮ ಸಂದೇಶ: ಮೇರಿ ಕೋಮ್‌ಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮೇಲೆ ಭಾರತದ ಪ್ರತಿ ಮಹಿಳೆಯರೂ ಈ ಹಂತಕ್ಕೇರಲು ಸಾಧ್ಯ. ಯುವತಿಯರು ಬಾಕ್ಸಿಂಗ್ ಕ್ರೀಡೆಯತ್ತಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಮದುವೆಯಾದ ಮೇಲೆ ಕ್ರೀಡೆಯನ್ನು ತೊರೆಯಬಾರದು. ಅವಳಿ ಮಕ್ಕಳಾದ ಮೇಲೆ ನಾನು ಎರಡು ಬಾರಿ ವಿಶ್ವ ಚಾಂಪಿಯನ್ ಆದೆ.
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದೇನೆ. ಈ ನನ್ನ ಸಾಧನೆ ಉಳಿದ ಮಹಿಳೆಯರಿಗೂ ಸ್ಫೂರ್ತಿ ಆಗಬಹುದೇನೊ?
* ಅಭ್ಯಾಸದ ಬಗ್ಗೆ: ಈಗ ಸನ್ಮಾನ ಸ್ವೀಕರಿಸುವುದರಲ್ಲೇ ಸಮಯ ಮುಗಿದು ಹೋಗುತ್ತಿದೆ. ಇನ್ನು ಅಭ್ಯಾಸ ಶುರು ಮಾಡಿಲ್ಲ. ಈ ವರ್ಷ ಯಾವುದೇ ಚಾಂಪಿಯನ್‌ಷಿಪ್ ಕೂಡ ಇಲ್ಲ. ಹಾಗಾಗಿ ಕೆಲದಿನ ವಿಶ್ರಾಂತಿ ತೆಗೆದುಕೊಂಡು ಆಮೇಲೆ ಅಭ್ಯಾಸ ಆರಂಭಿಸುತ್ತೇನೆ.
* ಸಿನಿಮಾ ಕುರಿತು: ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ನಿಜ. ನನ್ನ ಬಾಕ್ಸಿಂಗ್ ಜೀವನದ ಬಗ್ಗೆ ಅವರು ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಒಪ್ಪಿಗೆಯೂ ಇದೆ. ಇದಿನ್ನೂ ಆರಂಭದ ಹಂತದಲ್ಲಿದೆ.
ಸಾಧಕರಿಗೆ ಐದು ಲಕ್ಷ ರೂ. ಬಹುಮಾನ
ಬೆಂಗಳೂರು: ಸಾಧಕರಾದ ಮೇರಿ ಕೋಮ್ ಹಾಗೂ ಸೈನಾ ನೆಹ್ವಾಲ್ ಅವರಿಗೆ `ಹರ್ಬಾಲೈಫ್~ ತಲಾ ಐದು ಲಕ್ಷ ರೂಪಾಯಿ ಬಹುಮಾನ ನೀಡಿ ಸನ್ಮಾನಿಸಿತು. `ಸೈನಾ ಅವರು ನಮ್ಮ ಕಂಪೆನಿಯ ಪ್ರಚಾರ ರಾಯಭಾರಿಯಾಗಿ ಮತ್ತೊಂದು ವರ್ಷಕ್ಕೆ ಸಹಿ ಹಾಕಿದ್ದಾರೆ.
ಹಾಗೇ, ಮೇರಿ ಮತ್ತು ಸೈನಾ ಜೀವನಪೂರ್ತಿ ಉಚಿತವಾಗಿ ನಮ್ಮ ಉತ್ಪನ್ನಗಳನ್ನು ಬಳಸಬಹುದು~ ಎಂದು ಹರ್ಬಾಲೈಫ್ ಇಂಡಿಯಾ ಮುಖ್ಯಸ್ಥ ಅಜಯ್ ಖನ್ನಾ ಈ ಸಂದರ್ಭದಲ್ಲಿ ನುಡಿದರು.ಸೈನಾ ಅವರ ತಂದೆ ಡಾ.ಹರ್ವೀರ್ ಸಿಂಗ್ ಹಾಗೂ ಮೇರಿ ಪತಿ ಆನ್ಲೇರ್ ಕೋಮ್ ಕೂಡ ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.