ADVERTISEMENT

ಮೈಸೂರು, ಮಂಗಳೂರು, ಧಾರವಾಡ ವಲಯಕ್ಕೆ ಜಯ

23 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್: ಪರೀಕ್ಷಿತ್‌, ಸ್ವಪ್ನಿಲ್‌ ಉತ್ತಮ ಬ್ಯಾಟಿಂಗ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST

ಬೆಂಗಳೂರು: ಮೈಸೂರು, ಮಂಗಳೂರು ಮತ್ತು ಧಾರವಾಡ ವಲಯ ತಂಡಗಳು ಕೆ.ಎಸ್.ಸಿ.ಎ 23 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಜಯ ಸಾಧಿಸಿವೆ.

ಆದಿತ್ಯ ಗ್ಲೋಬಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೈಸೂರು ವಲಯ ರಾಯಚೂರು ವಲಯವನ್ನು 84 ರನ್‌ಗಳಿಂದ ಮಣಿಸಿತು.

ಆರ್‌ಡಬ್ಲ್ಯುಎಫ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಂಗಳೂರು ವಲಯ ತಂಡ ಶಿವಮೊಗ್ಗ ವಲಯ ತಂಡವನ್ನು 91 ರನ್‌ಗಳಿಂದ ಸೋಲಿಸಿತು.

ADVERTISEMENT

ಆಲೂರು ಮೂರನೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತುಮಕೂರು ವಲಯದ ವಿರುದ್ಧ ಧಾರವಾಡ ವಲಯ 118 ರನ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರು:

ಮೈಸೂರು ವಲಯ: 49.5 ಓವರ್‌ಗಳಲ್ಲಿ 228 (ಪೂವಯ್ಯ 29. ಅನಿಖಿತ್‌ 57, ಉತ್ತಮ್‌ ಅಯ್ಯಪ್ಪ 31, ದರ್ಶನ್‌ ಎಂ.ಬಿ 44;

ಅವಿನಾಶ್‌ ಡಿ 38ಕ್ಕೆ2, ಶೀತಲ್‌ ಕುಮಾರ್‌ 32ಕ್ಕೆ3, ಸೌರಭ್‌ ಮುತ್ತೂರ್‌ 47ಕ್ಕೆ4)

ರಾಯಚೂರು ವಲಯ: 37.5 ಓವರ್‌ಗಳಲ್ಲಿ 146ಕ್ಕೆ ಆಲೌಟ್‌ (ಸೌರಭ್‌ ಮುತ್ತೂರ್ 60;ತುಷಾರ್ ಹರಿಕೃಷ್ಣ 35ಕ್ಕೆ2, ಶಶಾಂಕ್‌ 16ಕ್ಕೆ2, ಉತ್ತಮ್‌ ಅಯ್ಯಪ್ಪನ್‌ 15ಕ್ಕೆ3).

ಫಲಿತಾಂಶ: ಮೈಸೂರು ವಲಯಕ್ಕೆ 84 ರನ್‌ಗಳ ಗೆಲುವು.

**

ಮಂಗಳೂರು ವಲಯ: 50 ಓವರ್‌ಗಳಲ್ಲಿ 7ಕ್ಕೆ223 (ರಾಹುಲ್ ಸುವರ್ಣ 26, ಕೇತ್‌ ಮಾರ್ಕ್‌ ಪಿಂಟೊ 65, ಸತ್ಯ ಸ್ವರೂಪ್‌ 31, ಮನೋಜ್‌ ಎಂ 23, ಅಭಿಲಾಷ್‌ ಶೆಟ್ಟಿ 23; ಅಭ್ಯುದಯ ಉಡುಪ 43ಕ್ಕೆ3, ಕಿಶೋರ್‌ ಮೊಗವೀರ್‌ 36ಕ್ಕೆ2, ಕಶ್ಯಪ್‌ ಎನ್‌ 37ಕ್ಕೆ2)

ಶಿವಮೊಗ್ಗ ವಲಯ: 36.4 ಓವರ್‌ಗಳಲ್ಲಿ 132 (ನಿಕ್ಷೇಪ್‌ ಖಾನಾಪುರ 62; ಅಭಿಲಾಶ್‌ ಶೆಟ್ಟಿ 31ಕ್ಕೆ2, ಶ್ರೀಶ ಆಚಾರ್‌ 22ಕ್ಕೆ3, ಕೇತ್ ಮಾರ್ಕ್‌ ಪಿಂಟೊ 22ಕ್ಕೆ2, ನಿಶ್ಚಿತ್‌ ಎನ್‌.ರಾವ್‌ 14ಕ್ಕೆ2).

ಫಲಿತಾಂಶ: ಮಂಗಳೂರು ವಲಯ ತಂಡಕ್ಕೆ 91 ರನ್‌ಗಳ ಜಯ.

**

ಧಾರವಾಡ ವಲಯ: 50 ಓವರ್‌ಗಳಲ್ಲಿ 264 (ಪರೀಕ್ಷಿತ್‌ 56, ಸ್ವಪ್ನಿಲ್‌ ಯಳವೆ 90, ಇಂದ್ರಸೇನ ದಾನಿ 28; ಮಹರೂಪ್‌ ಜಮಾನ್‌ 34ಕ್ಕೆ3, ಅಬ್ದುಲ್‌ ಹಸನ್‌ ಖಾಲಿದ್‌ 52ಕ್ಕೆ2)

ತುಮಕೂರು ವಲಯ: 34.4 ಓವರ್‌ಗಳಲ್ಲಿ 146 (ನಿರ್ಮಿತ್‌ ಶಶಿಧರ್‌ 40, ಅಬ್ದುಲ್ ಹಸನ್‌ ಖಾಲಿದ್‌ 46, ಪುನೀತ್‌ 26; ಮಹಾಂತೇಶ್‌ ಕುಪ್ಪಣ್ಣವರ್‌ 17ಕ್ಕೆ3, ಪ್ರತೀಕ್ ಪಾಟೀಲ್‌ 34ಕ್ಕೆ2, ಅಂಗದರಾಜ್‌ ಹಿತ್ತಲಮನಿ 8ಕ್ಕೆ2, ಇಂದ್ರಸೇನ ದಾನಿ 27ಕ್ಕೆ2).

ಫಲಿತಾಂಶ: ಧಾರವಾಡ ವಲಯಕ್ಕೆ 118 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.