ADVERTISEMENT

ಮೊಣಕಾಲು ಗಾಯ: ವಿಶ್ವಕಪ್‌ಗೆ ರೊಮೆರೊ ಇಲ್ಲ

ಏಜೆನ್ಸೀಸ್
Published 23 ಮೇ 2018, 19:34 IST
Last Updated 23 ಮೇ 2018, 19:34 IST
ಸರ್ಜಿ ರೊಮೆರೊ
ಸರ್ಜಿ ರೊಮೆರೊ   

ಬ್ಯುನಸ್‌ ಐರೆಸ್‌ (ಎಎಫ್‌ಪಿ): ಮುಂದಿನ ತಿಂಗಳು ನಡೆಯುವ ಫುಟ್‌ಬಾಲ್‌ ವಿಶ್ವಕಪ್‌ಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ಬೆನ್ನಲ್ಲೇ ಅರ್ಜೆಂಟೀನಾ ತಂಡಕ್ಕೆ ಹಿನ್ನಡೆ ಉಂಟಾಗಿದೆ. ತಂಡದ ಗೋಲ್‌ಕೀಪರ್‌ ಸರ್ಜಿ ರೊಮೆರೊ ಅವರು ಗಾಯದ ಕಾರಣ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.

‘ಮಂಗಳವಾರ ನಡೆದ ಅಭ್ಯಾಸದ ವೇಳೆ ರೊಮೆರೊ ಅವರ ಬಲ ಮೊಣಕಾಲಿಗೆ ಗಾಯವಾಗಿದೆ. ಇದರಿಂದಾಗಿ ಅವರು ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಿಲ್ಲ’ ಎಂದು ಅರ್ಜೆಂಟೀನಾ ಫುಟ್‌ಬಾಲ್‌ ಸಂಸ್ಥೆ (ಎಎಫ್‌ಎ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT